ಮಂಗಳೂರು: ಬೆಳ್ಳೂರು ಕಲ್ಲಗುಡ್ಡೆ ದಿ. ಸೆಬೆಸ್ಟೀನ್ ಅವರ ಧರ್ಮಪತ್ನಿ ಹೆಲೆನ್ ವೇಗಸ್ ಅವರು ಮಂಗಳೂರಿನ ವೆಲೆನ್ಸಿಯದ ತನ್ನ ಮಗನ ಮನೆಯಲ್ಲಿ ಅಲ್ಪ ಕಾಲದ ಅಸೌಖ್ಯದಿಂದ ಆ.23 ರಂದು ಭಾನುವಾರ ಬೆಳಗ್ಗೆ ನಿಧನಹೊಂದಿದರು.
ಮೃತರು ಐದು ಮಕ್ಕಳಾದ ಮೈಕಲ್ ವೇಗಸ್,ಸ್ಟ್ಯಾನಿ ವೇಗಸ್ ಕ್ಲೋಡಿ ವೇಗಸ್,ಜೂಡಿತ್ ವೇಗಸ್, ಜಾರ್ಜ್ ವೇಗಸ್ ಹಾಗೂ ಅಳಿಯಂದಿರನ್ನು, ಸೊಸೆಯಂದಿರನ್ನು , ಮೊಮ್ಮಕ್ಕಳನ್ನು, ಮರಿಮೊಮ್ಮಗ ಮತ್ತು ಅಪಾರ ವರ್ಗದ ಬಂಧು ವರ್ಗದವರನ್ನು ಅಗಲಿದ್ದಾರೆ.
ಮೃತರ ಅಂತ್ಯ ಸಂಸ್ಕಾರವನ್ನು ಆ. 24ರಂದು ಬೆಳಗ್ಗೆ 10ಗಂಟ್ಟೆಗೆ ಬೆಳ್ಳೂರು ಸೈಂಟ್ ಮೈಕಲ್ಸ್ ಚರ್ಚ್ ನಲ್ಲಿ ನೆರವೇರಿಸಲಾಗುವುದು ಎಂದು ಮೃತರ ಕುಟುಂಬಿಕರು ತಿಳಿಸಿದ್ದಾರೆ.
