ಕೈಕಂಬ:ಶಿಕ್ಷಣ ಪ್ರೇಮಿ, ಖ್ಯಾತ ಉದ್ಯಮಿ, ಎಲ್ಲಾ ಸಮುದಾಯ ಗಳೊಂದಿಗೆ ಉತ್ತಮ ಬಾಂಧವ್ಯ, ಹಲವಾರು ಶಿಕ್ಷಣ ಸಂಸ್ಥೆ ಗಳ ಸ್ಥಾಪಕರು, ವೈದ್ಯಕೀಯ ರಂಗದಲ್ಲೂ ಸಾಧನೆ, ವಿದೇಶ ಗಳಲ್ಲೂ ಹಲವಾರು ಸಂಸ್ಥೆ ಗಳ ಸ್ಥಾಫಕ, ಸಾಮಾಜಿಕ, ಧಾರ್ಮಿಕ ಧುರೀಣ, ಬಿ. ಎ. ಸಮೂಹ ಸಂಸ್ಥೆ ಗಳ ಸ್ಥಾಪಕಾಧ್ಯಕ್ಷ ಮಾನ್ಯ ತುಂಬೆ ಬಿ. ಅಹ್ಮದ್ ಹಾಜೀ ಮೊಯಿದಿನ್ ರವರು ನಿಧನ ಹೊಂದಿರುವ ವಿಚಾರ ತಿಳಿದು ತೀವ್ರ ವಿಷಾದ ವಾಗಿದೆ.

ಕೊಡುಗೈ ದಾನಿ ಯಾಗಿರುವ, ಹಲವಾರು ಸಂಘ ಸಂಸ್ಥೆ ಗಳ ಸ್ಥಾಪಕರಾಗಿ ಉತ್ತಮ ಮಾರ್ಗದರ್ಶನ ವನ್ನು ನೀಡುತಿದ್ದ ಅಹ್ಮದ್ ಹಾಜಿ ಮೊಯಿದಿನ್ ರವರ ನಿಧನ ನಮ್ಮ ಸಮಾಜಕ್ಕೆ ತುಂಬಲಾರದ ನಷ್ಠ ವೆಂದು, ಮುಸ್ಲಿಂ ಎಜುಕೇಷನಲ್ ಇನ್ಸ್ಟಿಟ್ಯೂಷನ್ಸ್ ಫೆಡೆರೇಶನ್ಸ್ ಅಧ್ಯಕ್ಷ ವೈ. ಮಹಮ್ಮದ್ ಬ್ಯಾರಿ ಎಡಪದವು, ಕಾರ್ಯದರ್ಶಿ ಬಿ. ಎ. ನಜೀರ್, ಕೋಶಾಧಿಕಾರಿ ಶರೀಫ್ ಹಾಜಿ ಕ್ರೆಸ್ಸೆಂಟ್, ಮೂಸಬ್ಬ ಪಿ ಬ್ಯಾರಿ, ಮತ್ತು ಮುಮ್ತಾಜ್ ಆಲಿ ಉಪಾಧ್ಯಕ್ಷರು, ಕೆ. ಮಯ್ಯದ್ದಿ ಹಾಜಿ, ಆಡಳಿತ ನಿರ್ವಹಣಾಧಿಕಾರಿ ಯವರು ಹಾಗೂ ಎಲ್ಲಾ ಸದಸ್ಯರು ತೀವ್ರ ಸಂತಾಪವನ್ನು ಸೂಚಿಸಿರುತ್ತಾರೆ.
