ಮಂಗಳೂರು:ಪಿಯುಸಿ ವಿದ್ಯಾರ್ಥಿಗಳು ಈ ಲಾಕ್‍ಡೌನ್‍ನಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಇಟಿ ಪರೀಕ್ಷೆಯನ್ನು ಹೇಗೆ ಎದುರಿಸಬಹುದು ಎಂಬ ಮಾಹಿತಿಯನ್ನು ಆನ್ಲೈನ್ ನಲ್ಲಿ ಸಿಇಟಿ ಅಣುಕು ಪರೀಕ್ಷೆಯನ್ನು ಬರೆಯುವ ವಿಶೇಷ ಅವಕಾಶವನ್ನು ಶ್ರೀನಿವಾಸ ತಾಂತ್ರಿಕ ಮಹಾವಿದ್ಯಾಲಯ ವಿದ್ಯಾರ್ಥಿಗಳಿಗೆ ಒದಗಿಸಿಕೊಡುತ್ತಿದೆ. ಈ ನಿಟ್ಟಿನಲ್ಲಿ ಜುಲೈ 21 ಮತ್ತು 22ರಂದು ಕರ್ನಾಟಕ ಸಿಇಟಿ ಆನ್ ಲೈನ್ ಅಣುಕು ಪರೀಕ್ಷೆಯನ್ನು ನಡೆಸಲಿದೆ.

downloadಈ ಪರೀಕ್ಷೆಯಲ್ಲಿ ಭೌತಶಾಸ್ತ್ರ, ಗಣಿತ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರ ವಿಷಯದಲ್ಲಿ 70 ನಿಮಿಷಗಳ ಅವಧಿಯಲ್ಲಿ ಪರೀಕ್ಷೆ ನಡೆಯುತ್ತದೆ. ವಿದ್ಯಾರ್ಥಿಗಳು ತಾ.21/7/2020ರಂದು ಪೂರ್ವಾಹ್ನ 9 ರಿಂದ 1 ಗಂಟೆಯವರೆಗೆ ಭೌತಶಾಸ್ತ್ರ, ಅಪರಾಹ್ನ 2 ಗಂಟೆ ಯಿಂದ 5 ಗಂಟೆಯವರೆಗೆ ರಸಾಯನಶಾಸ್ತ್ರ, ಮತ್ತು 22/7/2020ರಂದು ಪೂರ್ವಾಹ್ನ 9 ರಿಂದ 1 ಗಂಟೆಯವರೆಗೆ ಗಣಿತ, ಅಪರಾಹ್ನ 2 ಗಂಟೆ ಯಿಂದ 5 ಗಂಟೆಯವರೆಗೆ ಜೀವಶಾಸ್ತ್ರ ವಿಷಯಗಳಲ್ಲಿ ಪರೀಕ್ಷೆಗಳನ್ನು ತೆಗೆದುಕೊಳ್ಳಬಹುದಾಗಿದೆ.

ಸಿಇಟಿ ಬರೆಯುವ ಎಲ್ಲಾ ವಿದ್ಯಾರ್ಥಿಗಳು ಈ ಅಣುಕು ಪರೀಕ್ಷೆಯಲ್ಲಿ ಭಾಗವಹಿಸಿ ಇದರ ಪ್ರಯೋಜನ ಪಡೆಯುವುದಲ್ಲದೇ, ಪರೀಕ್ಷಾ ಪ್ರಶ್ನೆ ಪತ್ರಿಕೆಯ ವಿಶಿಷ್ಠತೆ ಹಾಗೂ ಕ್ಲಿಷ್ಟತೆಯ ಮಟ್ಟವನ್ನು ತಿಳಿದುಕೊಂಡು, ತಮ್ಮ ತಮ್ಮ ಕಲಿಕಾ ತಯಾರಿ ಮಟ್ಟವನ್ನು ವಿಶ್ಲೇಷಿಸಿ, ತಾವು ನಡೆಸುವ ಕಲಿಕೆಯಲ್ಲಿ ಯಾವ ಬದಲಾವಣೆಯನ್ನು ಮಾಡಿಕೊಂಡು ಅಭ್ಯಾಸ ಮಾಡಬಹುದೆಂದು ತಿಳಿದುಕೊಂಡು ಮುಂದಿನ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ಒಂದು ಉತ್ತಮ ಅವಕಾಶ ಇದಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ| ಶ್ರೀನಿವಾಸ ಮಯ್ಯ ಡಿ. ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಪಿಯುಸಿ ಮುಗಿಸಿದ ಎಲ್ಲಾ ವಿದ್ಯಾರ್ಥಿಗಳು ಈ ಅತ್ಯುತ್ತಮ ಅವಕಾಶವನ್ನು ಕೈ ಚೆಲ್ಲದೇ ಜುಲೈ 21 ಹಾಗೂ 22 ನೇ ತಾರೀಕಿನಂದು ನಡೆಯಲಿರುವ ಈ ಸಿಇಟಿ ಅಣುಕು ಪರೀಕ್ಷೆಯಲ್ಲಿ ಭಾಗವಹಿಸುಬಹುದಾಗಿದೆ. ಪರೀಕ್ಷೆ ಬರೆಯಲು ಸಮಯಕ್ಕೆ ಸರಿಯಾಗಿ https://sitmng.ac.in/Mock-Test  ಗೆ ಭೇಟಿ ನೀಡಿ ಪರೀಕ್ಷೆ ಬರೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಶ್ರೀ ಧೀರಜ್ ಹೆಬ್ರಿ ಇವರನ್ನು 8147766270 ರಲ್ಲಿ ಅಥವಾ     dheeraj.h7@sitmng.ac.in ನ್ನು ಸಂಪರ್ಕಿಸಬಹುದಾಗಿದೆ.

ಪ್ರಾಂಶುಪಾಲರು.

By suddi9

Leave a Reply

Your email address will not be published. Required fields are marked *