ಗುರುಪುರ : ಗುರುಪುರ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜಿ ಎಂ ಉದಯ ಭಟ್ ಹಾಗೂ ಗ್ಸರಾ. ಪಂ. ಸದಸ್ಯ ಕೆ. ಸದಾಶಿವ ಶೆಟ್ಟಿ ಮುಂದಾಳತ್ವದಲ್ಲಿ ಬಡಕರೆ ದೇವಂದಬೆಟ್ಟಿನ ಪರಂಬೋಕು(ಸರ್ಕಾರಿ) ತೋಡಿನಲ್ಲಿ ತುಂಬಿದ್ದ ಹೂಳೆತ್ತಲಾಯಿತು.
ತೋಡಿನಲ್ಲಿ ಕೆಲವು ವರ್ಷಗಳಿಂದ ಭಾರೀ ಪ್ರಮಾಣದಲ್ಲಿ ಹೂಳು ತುಂಬಿದ್ದು, ಮಳೆಗಾಲದಲ್ಲಿ ತೋಡಿನಲ್ಲಿ ತುಂಬಿ ಹರಿಯುವ ಪ್ರವಾಹದಿಂದ ಹತ್ತಿರದ ಭತ್ತದ ಗದ್ದೆಗಳಿಗೆ ಹಾನಿಯುಂಟಾಗುತ್ತಿದೆ ಎಂದು ಮಾಧ್ಯಮಗಳು ಪ್ರಕಟಿಸಿದ್ದವು. ಇದಕ್ಕೆ ತಕ್ಷಣದ ಸ್ಪಂದನೆ ಎಂಬಂತೆ ಶುಕ್ರವಾರ ಗುರುಪುರ ಪಂಚಾಯತ್ ಆಡಳಿತವು ತೋಡಿನ ಹೂಳೆತ್ತಿ ಸ್ವಚ್ಛಗೊಳಿಸಿತು.
