ಚೀನಾ ಜೊತೆ ಚಕ್ಕಂದ ಮಾತುಕತೆ ಬೇಡ.ಯೋಧರ ಬಲಿದಾನಕ್ಕೆ ತಕ್ಕ ಪಾಠ ಕಲಿಸಿ: ಇಕ್ಬಾಲ್ ಬಾಳಿಲ

    ಜಗತ್ತಿನ ಎರಡನೇ ಹಿಟ್ಲರಿನಂತೆ ವರ್ತಿಸುವ ಸರ್ವಾಧಿಕಾರಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ನ ಉದ್ದಟತನ ದಿನದಿಂದ ದಿನಕ್ಕೆ ಮಿತಿ ಮೀರುತ್ತಿದೆ. ಪದೇ ಪದೇ ಭಾರತವನ್ನು ಕೆಣಕುತ್ತಿದ್ದ ಚೀನಾ ಕಳೆದ ಐದು ದಶಕಗಳಲ್ಲೇ ಅತಿ ದೊಡ್ಡ ಸಂಘರ್ಷಕ್ಕೆ ಇಳಿದಿದೆ.ಜಗತ್ತಿಗೆ ಮಾರಕ ರೋಗದ ಸೋಂಕನ್ನು ಹರಡಿಸಿ ತಾನೇ ಎಲ್ಲವನ್ನು ಸಿದ್ದಿಸಿಕೊಂಡವನಂತೆ ವರ್ತಿಸುವ ಚೀನಾ ಅಹಂಕಾರದ ಪರಮಾವಧಿಯನ್ನು ಮೀರಿದೆ.

IMG-20200618-WA0129 ಇದಕ್ಕೆ ಸೈನಿಕರ ಅಟ್ಟಹಾಸವೇ ನಿದರ್ಶನ. ನಮ್ಮ ಭೂಮಿಯಲ್ಲಿ ಪದೇ ಪದೇ ಹಕ್ಕನ್ನು ಸಾಧಿಸಲು ಯತ್ನಿಸುವ ಮೂಲಕ ಭಾರತವನ್ನು ಕೆಣಕುತ್ತಾ ಬಂದಿರುವ ಚೀನಾ ಬಳಿ ಅರುಣಾಚಲ ಪ್ರದೇಶದ ಕೆಲವು ಭಾಗಗಳು ಸೇರಿ ದೊಡ್ಡ ಪ್ರಮಾಣದ ಭೂ ಪ್ರದೇಶವಿದೆ.ಭಾರತದೊಂದಿಗೆ ಭಾವಾನಾತ್ಮಕವಾಗಿ ಸಂಭಂದ ಹೊಂದಿರುವ ಮಾನಸ ಸರೋವರ ಪ್ರದೇಶವನ್ನು ಚೀನಾ ತನ್ನ ಅಂಕೆಯಲ್ಲಿಟ್ಟುಕೊಂಡಿವೆ.

IMG-20200618-WA0128ಹಂತಹಂತವಾಗಿ ತನ್ನ ಸೇನೆಯನ್ನು ನುಗ್ಗಿಸುತ್ತಾ ಭಾರತದ ಸಹನೆಯನ್ನು ಪರೀಕ್ಷಿಸುತ್ತಾ ಬಂದಿದೆ.ಈ ಸಂಘರ್ಷಕ್ಕೆ ಕಾರಣವಾಗಿರುವ ಗಾಲ್ವಾನ್ ಕಣಿವೆಯಲ್ಲಿ ಹಾಕಿರುವ ಟೆಂಟ್ ಕೂಡಾ ಪ್ರಚೋದನೆಯಾಗಿದೆ.  ಸಂಘರ್ಷದಲ್ಲಿ 20 ಧೀರ ಯೋಧರನ್ನು ನಾವು ಕಳೆದುಕೊಂಡಿದ್ದೇವೆ.  ನನ್ನ ಬೆನ್ನ ಹಿಂದೆ ಭಾರತವಿದೆ. ನನ್ನ ಭಾರತವನ್ನು ರಕ್ಷಿಸುವುದು ನನ್ನ ಜವಾಬ್ದಾರಿ ಎಂಬ ನಿಲುವಿನಲ್ಲಿ ಚಳಿ, ಬಿಸಿಲು, ಗಾಳಿಯನ್ನು ಲೆಕ್ಕಿಸದೆ ದೇಶವನ್ನು ಕಾಯುವ ಧೀರ ಯೋದರನ್ನು ಕಲ್ಲು ಕಬ್ಬಿಣಗಳಿಂದ ಹೊಡೆದು ಕೊಲ್ಲಲ್ಪಟ್ಟಿರುವುದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ.ಈಗಾಗಲೇ ಕೇಂದ್ರ ಸರಕಾರವು ಚೀನಾದೊಂದಿಗೆ ಹಲವು ಒಪ್ಪಂದಗಳು ನಡೆಸಿದ್ದು ಅದರಲ್ಲಿ ಪ್ರಮುಖವಾಗಿರುವ ಭಾರತದ ಏಕತೆಯ ಸಂಕೇತವಾದ ವಲ್ಲಭಭಾಯಿ ಪಟೇಲ್ ಪ್ರತಿಮೆಯ ಹೊಣೆಯನ್ನು ಚೀನಾ ಕಂಪೆನಿಯೇ ವಹಿಸಿಕೊಂಡಿತ್ತು.ದಿಲ್ಲಿ-ಮೀರತ್ ಬೃಹತ್ ಸುರಂಗ ಮಾರ್ಗವನ್ನು ಕೂಡಾ ಚೀನಾ ಕಂಪೆನಿಯು ವಹಿಸಿಕೊಂಡಿರುತ್ತದೆ.ತಕ್ಷಣವೇ ಎಲ್ಲಾ ವ್ಯಾಪಾರ ಒಪ್ಪಂದಗಳನ್ನು ಹಿಂದಕ್ಕೆ ಪಡೆಯಬೇಕು. ಕೂಡಲೇ ಸರ್ವಪಕ್ಷಗಳ ಮುಖಂಡರನ್ನು ಒಟ್ಟು ಸೇರಿಸಿ ತೀರ್ಮಾನ ಕೈಗೊಂಡು ಚೀನಾಕ್ಕೆ ಎಚ್ಚರಿಕೆ ನೀಡುವಂತೆ ಈ ಮೂಲಕ ಒತ್ತಾಯಿಸಲಾಗುತ್ತಿದೆ ಎಂದು SKSSF ಟ್ರೆಂಡ್ ಕೆಂದ್ರ ಸಮಿತಿ ಸದಸ್ಯರಾದ ಇಕ್ಬಾಲ್ ಬಾಳಿಲ ತಿಳಿಸಿದ್ದಾರೆ.

By Suddi9

Leave a Reply

Your email address will not be published. Required fields are marked *