ಮಂಗಳೂರು:ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಸ್ವಚ್ಛ ಗ್ರಾಮ ಸ್ವಚ್ಛ ಪರಿಸರ ಸ್ಪರ್ಧೆಯನ್ನು ದ.ಕ. ಜಿಲ್ಲಾ ಪಂಚಾಯತ್ ಸ್ವಚ್ಛ ಭಾರತ್ ಮಿಷನ್, ಜಿಲ್ಲಾ ನೆರವು ಘಟಕ ವತಿಯಿಂದ
ದ್ರವ ತ್ಯಾಜ್ಯವನ್ನು ಗ್ರಾಮೀಣ ಪ್ರದೇಶದಲ್ಲಿ ವೈಜ್ಞಾನಿಕವಾಗಿ /ಸಾಂಪ್ರದಾಯಿಕವಾಗಿ ಅಳವಡಿಸಿಕೊಂಡು ಸ್ವಚ್ಛತೆಯನ್ನು ಕಾಪಾಡಿಕೊಂಡಿರುವ ಕುರಿತು ಸಾರ್ವಜನಿಕರಿಂದ /ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು, ಸ್ವಯಂ ಸೇವಾ ಸಂಸ್ಥೆಗಳಿಂದ ಕಿರುಚಿತ್ರ / ಉತ್ತಮ ಗುಣಮಟ್ಟದ ಛಾಯಾಚಿತ್ರಗಳನ್ನೊಳಗೊಂಡ ಯಶೋಗಾಥೆ (ಲೇಖನ)ಗಳನ್ನು ನಿಗಧಿತ ಅರ್ಜಿಯೊಂದಿಗೆ 20- 06- 2020 ರೊಳಗೆ ಸಲ್ಲಿಅಲು ಅರ್ಜಿ ಆಹ್ವಾನಿಸಿದೆ.
ಶಾಲಾ ಕಾಲೇಜು, ಇಂಜಿನಿಯರ್ ವಿದ್ಯಾರ್ಥಿಗಳು ಗ್ರಾಮಗಳಲ್ಲಿ ವಿನೂತನವಾಗಿ ದ್ರವ ತ್ಯಾಜ್ಯ ನಿರ್ವಹಣೆ ಮಾಡುವ ಕುರಿತು ಚಿತ್ರಲೇಖನ, ಮಾದರಿಗಳನ್ನು ಸಿದ್ದಪಡಿಸಿ ಕಳುಹಿಸಬಹುದಾಗಿದೆ. ಅರ್ಜಿ ಸಲ್ಲಿಸಲು ದಿನಾಂಕ 19/06/2020 ಕೊನೆಯ ದಿನವಾಗಿರುತ್ತದೆ. ಉತ್ತಮ ಛಾಯಾಚಿತ್ರದೊಂದಿಗೆ ಮೂಡಿಬಂದ ಲೇಖನ/ ವಿಡಿಯೋಗಳನ್ನು ಆಯ್ಕೆ ಮಾಡಿಕೊಂಡು, ಆಯ್ಕೆಯಾದವುಗಳಿಗೆ ಜಿಲ್ಲಾ ಮಟ್ಟದಲ್ಲಿ ಪುರಸ್ಕಾರ ನೀಡಿ ಗೌರವಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಪಂಚಾಯಿತಿ ಸ್ವಚ್ಚ ಭಾರತ್ ಮಿಷನ್ (ಗ್ರಾ) ಶಾಖೆ, ಜಿಲ್ಲಾ ನೆರವು ಘಟಕ ಅಥವಾ ಅಯಾಯ ತಾ. ಪಂ. ಗಳನ್ನು ಸಂಪರ್ಕಿಸಲು ಕೋರಿದೆ. ಅರ್ಜಿಯನ್ನು ds-dakshinakannada@gov.in ಗೆ ಕಳುಹಿಸಬಹುದು.ಪ್ರಥಮ 15,000, ದ್ವಿತೀಯ 10,000 ಮತ್ತು ತೃತೀಯ 5, 000 ಬಹುಮಾನ ವಿದೆ.
ಗ್ರಾಮೀಣ ಪ್ರದೇಶದಲ್ಲಿ ದ್ರವ ತ್ಯಾಜ್ಯ ನಿರ್ವಹಣೆಯ ಜಾಗೃತಿ ಮೂಡಿಸುವ ಸಲುವಾಗಿ ಜೂ. 6 ರಿಂದ ಜೂ. 19 ರವರೆಗೆ ಸ್ವಚ್ಛ ಗ್ರಾಮ -ಸ್ವಚ್ಛ ಪರಿಸರ ಎಂಬ ಸ್ವಚ್ಛತಾ ಪಾಕ್ಷಿಕಾಚರಣೆಯನ್ನು ಆಯೋಜಿಸಲು ಗ್ರಾಮೀಣ ಕುಡಿಯು ವ ನೀರು ಮತ್ತು ನೈರ್ಮಲ್ಯ ಇಲಾಖೆ ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಇಲಾಖೆ ಉದ್ದೇಶಿಸಿದೆ.
