ಕೈಕಂಬ:ಶ್ರೀ ಕಾಲಬೈರವ ಮಂಜುನಾಥೇಶ್ವರ ದೇವಸ್ಥಾನ ಜೋಗಿಮಠ ಮಳಲಿ ಮಟ್ಟಿ ವಾರ್ಷಿಕ ಜಾತ್ರಾ ಮಹೋತ್ಸವವು ಮಾ.8 ಭಾನುವಾರದಿಂದ ಮಾ.9 ಸೋಮವಾರದವರೆಗೆ ಪರಮಪೂಜ್ಯ ಶ್ರೀ ಶ್ರೀ ಶ್ರೀ ಯೋಗಿರಾಜ “ನಿರ್ಮಲನಾಥ್ ಮಹಾರಾಜ್” ಜೋಗಿಮಠ, ಕದ್ರಿ ಇವರ ದಿವ್ಯ ಉಪಸ್ಥಿತಿ ಮತ್ತು ಆಶೀರ್ವಾದಗಳೊಂದಿಗೆ ಹಾಗೂ ಬ್ರಹ್ಮಶ್ರೀ ದೇರೆಬೈಲು “ವಿಠಲದಾಸ ತಂತ್ರಿಗಳು” ಶ್ರೀ ಕ್ಷೇತ್ರ ಇವರ ನೇತೃತ್ವದಲ್ಲಿ ನಡೆಯಲಿದೆ,

1

ಮಾ.8 ಭಾನುವಾರ:ಬೆಳಿಗ್ಗೆ 6.45ಕ್ಕೆ ದೀಪ ಬೆಳಗಿಸಿ ಸಾಮೂಹಿಕ ಪ್ರಾರ್ಥನೆ,7ಕ್ಕೆ ಪ್ರಾತಃಕಾಲ ಪೂಜೆ, 8ರಿಂದ ಮಹಿಷಂದಾಯ, ಧೂಮವತಿ ಬಂಟ ದೈವಗಳ ಭಂಡಾರ ಏರುವುದು.
9.30ರಿಂದ ನವ ಕಲಶಾಭಿಷೇಕ ಹಾಗೂ ಶ್ರೀ ರುಧ್ರಯಾಗ, ಮಧ್ಯಾಹ್ನ 12ರಿಂದ ಮಹಾಪೂಜೆ, ಪ್ರಸಾದ ವಿತರಣೆ, 12.30ರಿಂದ ಸ್ಥಳೀಯರಿಂದ ಭಕ್ತಿಗಾನ ವೈಭವ ಹಾಗೂ ಸಾಂಸ್ಕ್ರತಿಕ ನೃತ್ಯ ಕಾರ್ಯಕ್ರಮ, 8ರಿಂದ ಮಹಾಪೂಜೆ,ಪ್ರಸಾದ ವಿತರಣೆ, 9ರಿಂದ ಮಹಿಷಾಂದಾಯ, ಧೂಮವತಿ-ಬಂಟ ದೈವಗಳ ನೇಮೋತ್ಸವ.
ಮಾ.9 ಸೋಮವಾರ: 6.30ರಿಂದ ಬಂಗಾರ್ ಕಲಾವಿದೆರ್ ಗಂಜಿಮಠ ಇವರಿಂದ “ಒಂಜೆಕ್ ಒಂಜಾರೆ” ತುಳು ಹಾಸ್ಯಮಯ ನಾಟಕ ನಡೆಯಲಿದೆ.ರಾತ್ರಿ 8ರಿಂದ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, 9.30ರಿಂದ ಕಲ್ಲುರ್ಟಿ ಪಂಜುರ್ಲಿ ದೈವಗಳ ಕೋಲ ಬಲಿಸೇವೆ ನಡೆಯಲಿದೆ.

By Suddi9

Leave a Reply

Your email address will not be published. Required fields are marked *