ಶಾಫಿ ಪೂಕೋಯ ತಂಙ ಅಂದು ಬದರ್ ಭೂಮಿಯಲ್ಲಿ ಸಾಕ್ಷಿಯಾದ ಪ್ರವಾದಿ ಅನುಚರರ ನಾಮಗಳನ್ನು ಸ್ವರಿಸುವ ಕಾವ್ಯವಾಗಿದೆ ಮಜ್ಲಿಸುನ್ನೂರ್. ಆಧ್ಯಾತ್ಮಿಕ ಪಥದಲ್ಲಿ ಸಾಗಿದ್ದ ಅವರ ಹೆಸರನ್ನು ಹೇಳುವ ಮೂಲಕ ನಮ್ಮೊಳಗಿನ ಆತ್ಮವು, ಆಧ್ಯಾತ್ಮದ ಕಡೆಗೆ ಸಾಗುತ್ತದೆ ಎಂದು ಕೇರಳದ ಸಯ್ಯಿದ್ ಶಾಫಿ ಪೂಕೋಯ ತಂಙಳ್ ಅಲ್ ಹೈದ್ರೋಸಿ ಅವರು ಹೇಳಿದರು.ಅವರು ಕುಪ್ಪೆಪದವು ಶಂಸುಲ್ ಉಲಮಾ ಇಸ್ಲಾಮಿಕ್ ಎಜ್ಯುಕೇಶನ್ ಸೆಂಟರ್ ವತಿಯಿಂದ ಶುಕ್ರವಾರ ಮತ್ತು ಶನಿವಾರ ನಡೆದ ದ್ವಿದಿನಗಳ ಮಜ್ಲಿಸುನ್ನೂರ್ ವಾರ್ಷಿಕೋತ್ಸವದ ಸಮಾರೋಪ ಸಮಾರಂಭದಲ್ಲಿ ಅನುಗ್ರಹ ಭಾಷಣಗೈದು ಮಾತನಾಡಿದರು.ಜಗತ್ತಿನಲ್ಲಿಂದು ಕೊರೋನಾದಂತಹ ಮಾರಕ ರೋಗಗಳು ಕಾಲಿಡುತ್ತಿವೆ. ನಮ್ಮ ಸುತ್ತಮುತ್ತಲಲ್ಲೂ ಪ್ರಕರಣಗಳು ಕೇಳಿಬರುತ್ತಿವೆ. ದೇಶದಲ್ಲಿರುವ ಸಮುದಾಯಗಳು ವಿವಿಧ ಕಾರಣಗಳಿಂದ ಪರಸ್ಪರ ಐಕ್ಯತೆಯನ್ನು ಕಳೆದುಕೊಳ್ಳುತ್ತಿದ್ದಾರೆ. ಇಂತಹ ಸಂದಿಗ್ಧ ಘಟ್ಟದಲ್ಲಿ ನಾವು ಶಾಂತಿಯ ಪ್ರಚಾರಕರಾದ ಪ್ರವಾದಿ ಪೈಗಂಬರರ ಚರ್ಯೆಗಳನ್ನು ಜೀವನದಲ್ಲಿ ಅಳವಡಿಸಬೇಕಿದೆ ಎಂದರು.ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ SUIಇಅ ಇಮಾಂ ಬಶೀರ್ ವಹಬಿ ಮಾತನಾಡಿ, ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಕಾರ್ಯಕ್ರಮಗಳು ಇಂದು ಮನರಂಜನೆಯ ಹಾದಿ ಹಿಡಿದಿರುವುದು ಸಮಾಜದ ಎದುರಿಸುತ್ತಿರುವ ಅತಿದೊಡ್ಡ ದುರಂತಗಳಲ್ಲಿ ಒಂದಾಗಿದೆ. ಆದರೆ, ಇಂದು ಎಲ್ಲೆಡೆ ನಡೆಸಲ್ಪಡುವ ಮಜ್ಲಿಸುನ್ನೂರ್ ಆತ್ಮೀಯ ಚೈತನ್ಯವನ್ನು ನೀಡುವ ಕಾರ್ಯಕ್ರಮವಾಗಿದೆ ಎಂದರು. ಶನಿವಾರ ದಿನದ ಕಾರ್ಯಕ್ರಮದಲ್ಲಿ ಎ.ಎಸ್ ಮಹಮ್ಮದ್ ಅಲಿ ದಾರಿಮಿ ಪರ್ಲಡ್ಕ ಮುಖ್ಯ ಭಾಷಣಗೈದರು.ಕಾರ್ಯಕ್ರಮದಲ್ಲಿ SUIಇಅ ಗೌರವಾಧ್ಯಕ್ಷರಾದ ಜನಾಬ್ ಕೆ. ಆದಮ್, ಅಧ್ಯಕ್ಷ ಕೆ,ಉಂಞಕ, ಉಪಾಧ್ಯಕ್ಷ ಕೆ.ಹಸನ್ ಸಖಾಫಿ, ಪ್ರಧಾನ ಕಾರ್ಯದರ್ಶಿ ಯಾಕುಬ್, ಮೈದಿನ್ ಕುಳವೂರು, ಹಾಜಿ ಸಲೀಂ, ಸುಲೈಮಾನ್ ಕುದ್ದಬೆಟ್ಟು, ಉಮರಬ್ಬ, ಕುಳವೂರು ಖತೀಬರಾದ ಫಾರೂಕ್ ಹನೀಫಿ, ಮೂಲರಪಟ್ನ ಖತೀಬ್ ಅಬ್ದುಲ್ ಸಲಾಂ ಯಮಾನಿ, ಬಶೀರ್ ದಾರಿಮಿ ಪೆರಾಡಿ, ಬಿ,ಎ ಅಬೂಬಕರ್ ಕಲ್ಲಾಡಿ, ಮಹಮ್ಮದ್ ಬಶೀರ್ ಸೂರಲ್ಪಾಡಿ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕೂಟು ಪ್ರಾರ್ಥನೆ ಬಳಿಕ ಅನ್ನದಾನ ವಿತರಣೆ ನಡೆಯಿತು. SUIಇಅ ಅಧ್ಯಾಪಕರಾದ ನಿಝಾಮ್ ಅನ್ಸಾರಿ ಸ್ವಾಗತಿಸಿ, ನಿರೂಪಿಸಿದರು.
