ಮಂಗಳೂರು::ಶಾಸಕ ಎಂ.ವೈ.ಪಾಟೀಲ್ ಅಧಿಕಾರಕ್ಕೆ ಬಂದು ಎರಡು ವರ್ಷಗಳು ಕಳೆದರೂ ಯಾವುದೇ ಅಭಿವೃದ್ಧಿ ಕಾರ್ಯಗಳು ಮಾಡಿಲ್ಲ ಹಾಗೂ ಜಿಪಂ ಸದಸ್ಯ ಅರುಣಕುಮಾರ ಪಾಟೀಲ್ ಪ್ರತಿ ಒಂದು ಅಭಿವೃದ್ಧಿ ವಿಷಯದಲ್ಲಿ ಹಸ್ತಕ್ಷೇಪ ಮಾಡುತ್ತಾರೆ ಹೀಗಾಗಿ ಕಳೆದ ಹಲವು ಚುನಾವಣೆಯಲ್ಲಿ ನಮ್ಮಗೆ ಹಿನ್ನಡೆ ಆಗುತ್ತಿದೆ ಎಂದು ಶಿವಪುತ್ರ ಜಿಡ್ಡಗಿ ಆರೋಪ ಮಾಡಿದರು.ಅಫಜಲಪುರ ತಾಲೂಕಿನ ಮಾಶಾಳ ಗ್ರಾಮದ ಜೆ.ಎಂ.ಕೊರಬು ತೋಟದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ನಾವು ಶಾಸಕ ಎಂ.ವೈ.ಪಾಟೀಲ್, ಮಾಜಿ ಶಾಸಕ ಮಾಲಿಕಯ್ಯ ಗುತ್ತೇದಾರ ಅವರಿಗೆ ಹಲವು ಬಾರಿ ಬೆಂಬಲ ನೀಡಿ ಗೆಲ್ಲಿಸಿದ್ದರು ಸಹ ನಮ್ಮಗೆ ಯಾವುದೇ ರೀತಿಯ ಅಭಿವೃದ್ದಿ ಕಾರ್ಯಗಳಿಗೆ ಸಹಕಾರ ನೀಡುತ್ತಿಲ್ಲ ಹೀಗಾಗಿ ಸಮಾಜ ಸೇವಕ ಜೆ.ಎಂ.ಕೊರಬು ಅವರಿಗೆ ನಮ್ಮ ಬೆಂಬಲ ಇರುತ್ತದೆ ಮುಂದಿನ ಯಾವುದೇ ಚುನಾವಣೆಯಲ್ಲಿ ನಾವು ಒಟ್ಟಾಗಿ ಸೇರಿ ಕೇಲಸ ಮಾಡುತ್ತೇವೆ ಎಂದು ತಿಳಿಸಿದರು.ನಂತರ ಶಿವರುದ್ರಪ್ಪ ಅವಟೆ ಮಾತನಾಡಿ ಮಾಶಾಳ ಗ್ರಾಮದ ಬಿಜೆಪಿ ಮುಖಂಡರು ಹಲವಾರು ಹಗರಣಗಳು ಮಾಡಿದ್ದಾರೆ.
ಕೇವಲ ಹಣ ಮತ್ತು ಹೆಂಡದಿಂದ ರಾಜಕೀಯ ಮಾಡುತ್ತಿದ್ದಾರೆ ಆದರೆ ಅವರು ನಮ್ಮ ನಾಯಕರಾದ ಜೆ.ಎಂ.ಕೊರಬು ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ ಹಾಗೂ ನಾವು ಗ್ರಾಮದಲ್ಲಿ ಯಾವುದೇ ರೀತಿಯ ಹಗರಣಗಳು ಮಾಡಿಲ್ಲ ಮೇಲಾಗಿ ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ಅಡಚಣೆ ಮಾಡಿಲ್ಲ ನಮ್ಮ ಮೇಲೆ ಆರೋಪ ಮಾಡುವುದನ್ನು ಬಿಟ್ಟು ಬಹಿರಂಗ ಚರ್ಚೆಗೆ ಬನ್ನಿ ಹಾಗೂ ಮುಂದಿನ ಗ್ರಾಪಂ ಚುನಾವಣೆ ಸೇರಿ ಹಲವು ಚುನಾವಣೆಯಲ್ಲಿ ಜೆ.ಎಂ.ಕೊರಬು ಅವರ ನಾಯಕತ್ವದಲ್ಲಿ ಮಾಡುತ್ತೇವೆ. ನಮ್ಮ ಗ್ರಾಮದವರೇ ಕೊರಬು ಅವರಿಗೆ ರಾಜಕೀಯ ಹಾಗೂ ವೈಯಕ್ತಿಕವಾಗಿ ಬೆಂಬಲ ನೀಡುತ್ತೇವೆ ಎಂದು ಹೇಳಿದರು.ನಂತರ ಸಮಾಜ ಸೇವಕ ಜೆ.ಎಂ.ಕೊರಬು ಮಾತನಾಡಿ ನನ್ನ ವೃತ್ತಿ ಜೀವನದಿಂದ ನಿವೃತ್ತಿಯಾದ ಸಂದರ್ಭದಲ್ಲಿ ನಾನು ಮೊದಲಿನಿಂದಲೂ ಮಾದರಿ ರೈತ ಆಗಲು ಬಹಳಷ್ಟು ಆಸೆ ಇತ್ತು.ಆದರೆ ನಾನು ರಾಜಕೀಯಕ್ಕೆ ಬರಲು ಇಷ್ಟ ಇರಲಿಲ್ಲ ಈಗಿನ ರಾಜಕೀಯ ಮುಖಂಡರಾದ ಶಾಸಕ ಎಂ.ವೈ.ಪಾಟೀಲ್ ಹಾಗೂ ಮಾಲಿಕಯ್ಯ ಗುತ್ತೇದಾರ ಬಗ್ಗೆ ಜನರು ಬೇಸರ ವ್ಯಕ್ತಪಡಿಸಿ ಹಲವಾರು ರಾಜಕೀಯ ಮುಖಂಡರು,ಹಲವು ಸಮಾಜದ ಮುಖಂಡರ ಒತ್ತಾಯ ಮೇರೆಗೆ ರಾಜಕೀಯಕ್ಕೆ ಬಂದಿದ್ದೇನೆ.ನಾನು ಕಾಂಗ್ರೇಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದೇನೆ.ಆದರೆ ನಮ್ಮ ವಿರೋಧ ಪಕ್ಷದ ಮುಖಂಡರು ನಮ್ಮ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ.ಯಾವುದೇ ಸ್ವಾರ್ಥವಿಲ್ಲದೆ ನಿಸ್ವಾರ್ಥವಾಗಿ ಬಡ ಜನರ ಪರವಾಗಿ ಉಸಿರು ಇರುವರೆಗೂ ಕೆಲಸ ಮಾಡುತ್ತೇನೆ.ಮಾಶಾಳ ಗ್ರಾಮದ ಕಾಂಗ್ರೇಸ್ ಪಕ್ಷದ ಗ್ರಾಮ ಪಂಚಾಯತಿ ಅಧ್ಯಕ್ಷರು,ಸದಸ್ಯರು,ಮುಖಂಡರು ಸೇರಿ ಮುಂದಿನ ಚುನಾವಣೆಯಲ್ಲಿ ನನ್ನಗೆ ಬೆಂಬಲ ನೀಡುತ್ತೇವೆ ಎಂದು ಹೇಳಿರುವುದು ಸಂತೋಷದ ವಿಷಯವಾಗಿದೆ.ಮುಂದಿನ ದಿನಗಳಲ್ಲಿ ನಾವು ಒಟ್ಟಾಗಿ ಸೇರಿ ಗ್ರಾಮದ ಅಭಿವೃದ್ಧಿಗೆ ಶ್ರವಿುಸುತ್ತೇವೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಚಂದ್ರಕಾಂತ ಹಾವಳಗಿ,ಶರಣಪ್ಪ ಪುಜಾರಿ,ಭುತಾಳಿ ಪುಜಾರಿ,ಮಕ್ಬೂಲ್ ಶೇಖ,ಸೂರ್ಯಕಾಂತ ರಾಕಾ,ಶಂಕಲಿಂಗ ಮೋಸಲಗಿ,ಪಂಡಿತ ನಾವಿ,ಹಣಮಂತ ಗೌಡಗಾಂವ,ನಜೀರಅಹ್ಮದ ಬಂಗೋಳಿ,ಗೌಸಪಾಕ ನಿಗೇವಾನ,ಶರಣಪ್ಪ ಹಂಚನಾಳ,ಪಂಚಪ್ಪ ಮುಗಳಿ,ಮರೇಪ್ಪ ಮುಗಳಿ,ಭೀಮುರಾಯ ನಿಂಬರಗಿ,ಸಿದ್ಧರಾಮ ಆಲಮೇಲ್,ಶೇಟ್ಟಪ್ಪ ಇಟಗಾರ,ಶಿವಯೋಗ್ಯಪ್ಪ ದಿಗಂಸಗಿ,ಅಂಬಣ್ಣ ಹುಚ್ಚಾ,ಸಂತೋಷ ಮರಾಠಿ,ಭಗವಾನ ದೈಗೊಡೆ,ಖಾಜಪ್ಪ ಸಿಂಗೆ,ಶರಣಪ್ಪ ಭೂಸ್ತಿ ಸೇರಿ ಹಲವು ಮುಖಂಡರು ಸಮಾಜ ಸೇವಕ ಜೆ.ಎಂ.ಕೊರಬು ಅವರಿಗೆ ಬೆಂಬಲ ಸೂಚಿಸಿದರು.
ಅನಿಸಿಕೆ:
ಯಾವುದೇ ಸ್ವಾರ್ಥವಿಲ್ಲದೆ ನಿಸ್ವಾರ್ಥವಾಗಿ ಬಡ ಜನರ ಪರವಾಗಿ ಕೆಲಸ ಮಾಡುತ್ತಿರುವ ಜೆ.ಎಂ.ಕೊರಬು ಅವರಿಗೆ ಕಾಂಗ್ರೇಸ್ ಪಕ್ಷದ ಎಲ್ಲಾ ಮುಖಂಡರು ಸೇರಿ ಬೆಂಬಲವನ್ನು ಸೂಚಿಸಿದ್ದೇವೆ.ಮುಂದಿನ ದಿನಗಳಲ್ಲಿ ಅವರ ನಾಯಕತ್ವದಲ್ಲಿ ರಾಜಕೀಯ ಮಾಡುತ್ತೇವೆ
– ಮಕ್ಬೂಲ್ ಶೇಖ ಮುಖಂಡರು ಮಾಶಾಳ
