ಕೈಕಂಬ: ರಾಷ್ಟ್ರಪ್ರೇಮ ಪೋಸ್ಟ್ ಕಾರ್ಡು ಅಥವಾ ಸಾಮಾಜಿಕ ಜಾಲತಾಣದಲ್ಲಿ ಪ್ರದರ್ಶಿಸುವುದಲ್ಲ. ಅದು ಹೃದಯಲ್ಲಿರುವುದು. ಹೃದಯವೇ ಇಲ್ಲದ ಹಿಂದೂಗಳೆಂಬ ಮುಖವಾಡ ಹಾಕಿರುವ `ಹಿಂದೂಗಳು’ ಬಡ ಹಾಗೂ ಯುವ ಜನರಲ್ಲಿ ಗನ್ ಕೊಟ್ಟು, ಜಾತಿ ಮತ್ತು ದೇಶದ ಹೆಸರಲ್ಲಿ ಕಚ್ಚಾಡುವಂತೆ ಮಾಡುತ್ತಿದ್ದಾರೆ. ಅವರ ನಾಯಕರು ಬಡಜನರನ್ನು ಪ್ರಚೋದಿಸುವ ಸುಳ್ಳುಗಾರರಾಗಿದ್ದಾರೆ. ಕ್ರಾಂತಿ ಪ್ರತಿಯೊಬ್ಬರ ಮನೆಯಿಂದ ಆರಂಭವಾಗಬೇಕು. ಅಂದರೆ, ಪ್ರತಿ ಮನೆಯಲ್ಲೂ ಗಾಂಧೀಜಿ, ಭಗತ್ ಸಿಂಗ್ ಕಾಣುವಂತಾಗಬೇಕು. ಜೈ ಶ್ರೀ ರಾಮ್ ಎನ್ನುವಾಗ `ಜೈ ಸಂವಿಧಾನ್, ಜೈ ಭೀಮ್’ ಎನ್ನುವ ಮಂದಿ ಹುಟ್ಟಿ ಬರಬೇಕು ಎಂದು ಬೆಂಗಳೂರಿನ ಕಾಲೇಜು ವಿದ್ಯಾರ್ಥಿನಿ ಅಮೂಲ್ಯ ಹೇಳಿದರು.7 amulya 2

ಅವರು ಫೆ.7 ರಂದು ಅಡ್ಡೂರಿನಲ್ಲಿ ಬೃಹತ್ ಪ್ರತಿಭಟನಾ ಸಭೆಯಲ್ಲಿ ಸಮಾವೇಶವನ್ನುದ್ದೇಶಿಸಿಉದ್ದೇಶಿಸಿ ಮಾತನಾಡಿದ ಅವರು ಆರೆಸ್ಸೆಸ್, ಬಿಜೆಪಿ, ಅಮಿತ್ ಶಾ, ಪ್ರಧಾನಿ ಮೋದಿ, ಮಹೇಶ್ ವಿಕ್ರಂ ವಿರುದ್ಧ ವಾಗ್ದಾಳಿ ನಡೆಸುತ್ತ, ಕೇಂದ್ರ ಸರ್ಕಾರದ ಸಂವಿಧಾನ ವಿರೋಧಿ ಕಾಯ್ದೆ ಸಿಎಎಮತ್ತು ಸರ್ಕಾರ ಜಾರಿಗೊಳಿಸಲು ಉದ್ದೇಶಿಸಿರುವ ಎನ್‍ಆರ್‍ಸಿ ಮತ್ತು ಎನ್‍ಪಿಆರ್ ವಿರುದ್ಧ ವಾಗ್ದಾಲಿ ನಡೆಸಿದರು. ಕಾರ್ಯಕ್ರಮವನ್ನು ಅಡ್ಡೂರಿನ `ಸಂವಿಧಾನ ಸಂರಕ್ಷಣಾ ಸಮಿತಿ’ಯು ಆಯೋಜಿಸಿತು.7 sabhe

ಪ್ರಗತಿಪರ ಚಿಂತಕ ಫಾ. ವಿಲಿಯಂ ಮಾರ್ಟಿಸ್ ಮಾತನಾಡಿ, ಕೇಂದ್ರ ಸರ್ಕಾರ ತಂದಿರುವ ಪೌರತ್ವ ಕಾಯ್ದೆ ಅಥವಾ ಸಿಎಎ, ಎನ್‍ಆರ್‍ಸಿ ವಿರುದ್ಧ ಈ ದೇಶದ ಮುಸ್ಲಿಮರೇ ಧ್ವನಿ ಎತ್ತಿದ್ದಾರೆಂದು ಹೇಳಿದರೆ ತಪ್ಪಾಗುತ್ತದೆ. ಉತ್ತರದಲ್ಲಿ ನಾಗಸಾಧುಗಳಾದ ಹಿಂದೂಗಳು ಇದರ ವಿರುದ್ಧ ಹೋರಾಟ ಆರಂಭಿಸಿದ್ದಾರೆ. ಆದ್ದರಿಂದ ಈ `ಕಂಟಕ’ ಕೇವಲ ಮುಸ್ಲಿಮರಿಗಲ್ಲ, ಇದು ಹಿಂದೂಗಳು, ಕ್ರಿಶ್ಚಿಯನ್ನರ ಸಹಿತ ಎಲ್ಲ ಜಾತಿಯವರಿಗೂ ಕಂಟಕ ತಂದೊಡ್ಡುವ ಸಂಗತಿ. ಆದ್ದರಿಂದ ಎಲ್ಲರೂ ಈ ಹೋರಾಟದಲ್ಲಿ ಕೈಜೋಡಿಸಬೇಕು ಎಂದರು.7-001

ಚಿಂತಕ ಭಾಸ್ಕರ್ ಪ್ರಸಾದ್‍ಬೆಂಗಳೂರು ಮಾತನಾಡಿ, ಆರೆಸ್ಸೆಸ್ ಮುಖಂಡರು ತನ್ನ ಬಳಗಕ್ಕೆ ತಮ್ಮ ಬೇಳೆ ಬೇಯಿಸಿಕೊಳ್ಳಬಹುದಾದ ಮಂದಿಯ ಕತೆಗಳನ್ನು ಮಾತ್ರ ಹೇಳುತ್ತಿದೆ. ಅವರು ಯಾವತ್ತೂ ಗಾಂಧೀಜಿ, ಸಂವಿಧಾನ, ಅಂಬೇಡ್ಕರರ ಕತೆ ಹೇಳುವುದಿಲ್ಲ. ಆರೆಸ್ಸೆಸ್ ಆಗಾಗ್ಗೆ ಬಿಜೆಪಿಗೆ `ಹಿಂದೂತ್ವ’ ಪ್ರಚೋದನೆ ಹಾಗೂ ಮುಸ್ಲಿಂ ದೂಷಣೆ ತಂತ್ರ ಹೆಣೆಯುತ್ತಿದೆ ಎಂದರು.7 bhaskar1

ಮತ್ತೊಬ್ಬ ಚಿಂತಕ ಅಶ್ರಫ್ ಮಾಚಾರ್ ಮಾತನಾಡಿ ಗನ್ನಿನಿಂದ, ಬೂಟಿನಿಂದ, ಬೆದರಿಕೆಯೊಡ್ಡಿ ಈ ಹೋರಾಟ ಹತ್ತಿಕ್ಕಲು ಯಾರಿಂದಲೂ ಸಾಧ್ಯವಿಲ್ಲ. ಮುಸ್ಲಿಮರು `ಭಯೋತ್ಪಾದಕರು’ ಎಂದು ಬಿಂಬಿಸಿ, ದಬ್ಬಾಳಿಕೆ ನಡೆಸುವ ಪ್ರಯತ್ನ ಈ ಪೌರತ್ವ ಕಾಯ್ದೆಯಡಿ ಅಡಗಿದೆ. ಇದಕ್ಕಾಗಿ ಆರೆಸ್ಸೆಸ್ ತಲೆಗಳು ಮನುವಾದದ ಹಿಂದೆ ಬಿದ್ದಿದ್ದಾರೆ. ಕೇಂದ್ರ ಸರ್ಕಾರವು ಸಮಾನತೆ ಹೆಸರಲ್ಲಿ ದೇಶವನ್ನು ಒಡೆದು ಆಳುವ ನೀತಿಯತ್ತ ಒಲವು ತೋರಿಸುತ್ತಿದೆ ಎಂದು ಗುಡುಗಿದರು.7 machar

ಸುಫ್ಯಾನ್ ಸಖಾಫಿ ಮಾತನಾಡಿ, ಇಂದು ನಮ್ಮ ಸಂವಿಧಾನ ಗಂಡಾಂತರದಲ್ಲಿದೆ. ನಾವು ಮುಸ್ಲಿಮರ ವಿರುದ್ಧ ಕೇಳಿ ಬಂದಿರುವ ಇತರ ಕೆಲವು ಗಂಭೀರ ವಿಚಾರ, ನಿಂದನೆಗಳ ವಿರುದ್ಧ ಹೋರಾಟ ನಡೆಸಬೇಕಿದ್ದರೂ, ಅದೆಲ್ಲವನ್ನೂ ಸಹಿಸಿಕೊಂಡಿದ್ದರೂ, ದೇಶದ ಪ್ರತಿಯೊಬ್ಬ ನಾಗರಿಕರ ಅಸ್ತಿತ್ವವನ್ನೇ ಪ್ರಶ್ನಿಸುವ `ಪೌರತ್ವ’ ಕಾಯ್ದೆ ಎದುರಾದಾಗ ನಾವು ಪ್ರಶ್ನಿಸುತ್ತಿದ್ದೇವೆ. ಇದು ನಮ್ಮಷ್ಟೇ ಇತರರಿಗೂ ಸಮಸ್ಯೆಯಾಗಲಿದೆ ಎಂಬುದನ್ನು ಯಾರೂ ಮರೆಯಬಾರದು ಎಂದರು.7 supyan

ಮಹಿಳಾ ಚಿಂತಕಿ ನಜ್ಮಾ ನಝೀರ್ ಚಿಕ್ಕನೇರಳೆ ಮಾತನಾಡುತ್ತ, ಇದುವರೆಗೂ ತನ್ನ ಕಚೇರಿಯಲ್ಲಿ ರಾಷ್ಟ್ರಧ್ವಜ ಹಾರಿಸಲು ಇಷ್ಟಪಡದ ಆರೆಸ್ಸೆಸ್, ಬಿಜೆಪಿ ಮೂಲಕ ಈ ದೇಶದ ನಾಗರಿಕರಲ್ಲಿ ಒಡಕು ಹುಟ್ಟಿಸುವಂತಹ ಕೆಲಸಗಳಿಗೆ ಪ್ರಚೋದನೆ ನೀಡುತ್ತಿದೆ. ಈ ಕಾಯ್ದೆಗಳು ಅನುಷ್ಠಾನಕ್ಕೆ ಬಂದಾಗ ದೇಶದ ಮುಸ್ಲಿಮರಿಗೆ ಮಾತ್ರ ತೊಂದರೆಯಾಗಲಿದೆ ಎಂದು ಯಾರೂ ಭಾವಿಸುವಂತಿಲ್ಲ. ಇದರಿಂದ ಎಲ್ಲ ವರ್ಗದವರಿಗೆ ತೊಂದರೆ ಹಾಗೂ ಅವಮಾನವಾಗಲಿದೆ. ಈಗಲೇ ಈ ವಿಚಾರ ಅರಿತು ಕೇಂದ್ರದ ಕಾಯ್ದೆ ವಿರುದ್ಧ ಧೈರ್ಯದಿಂದ ಒಗ್ಗೂಡಿ ಹೋರಾಟ ನಡೆಸಬೇಕು. ಇಂತಹ ಹೋರಾಟಗಳಿಗೆ `ಶಿಕ್ಷಣ ಕ್ರಾಂತಿ’ ಇನ್ನಷ್ಟು ಬಲ ತುಂಬುತ್ತದೆ ಎಂದರು.

7 najma

ಸಂವಿಧಾನ ಸಂರಕ್ಷಣಾ ಸಮಿತಿ(ಅಡ್ಡೂರು) ಅಧ್ಯಕ್ಷ ಯು ಪಿ ಇಬ್ರಾಹಿಂ ಸ್ವಾಗತಿಸಿ, ಸಮಾವೇಶ ಮಹತ್ವ ತಿಳಿಸಿದರು. ಸಮಿತಿಯ ನೌಫಾಲ್ ಕೆಬಿಎಸ್ ಕಾರ್ಯಕ್ರಮ ನಿರೂಪಿಸಿದರು . ಅಸ್ತಾರ್ ಅಡ್ಡೂರು ವಂದಿಸಿದರು. ಫಾರೂಕ್ ಅಡ್ಡೂರು ಹಾಗೂ ನಜ್ಮಾ ನಝೀರ್ ತಂಡ `ಆಜಾದ್’ ಘೋಷಣೆಗಳೊಂದಿಗೆ ನೆರೆದ ಸಭಿಕರಲ್ಲಿ `ಪೌರತ್ವ’ ವಿರುದ್ಧ ಹೊಸ ಸಂಚಲನ ಮೂಡಿಸಿದರು.

By Suddi9

Leave a Reply

Your email address will not be published. Required fields are marked *