ಮಂಗಳೂರು;ಗ್ರಾಮಸಭೆಯಲ್ಲಿ ಯುವಸ್ಪಂದನ ಅರಿವು ಅಯೋಜನೆ ಮಾಡುವಂತೆ ಅಧಿಕಾರಿ ಗಳಿಗೆ ದ. ಕ. ಜಿಲ್ಲಾಧಿಕಾರಿ ಶ್ರೀಮತಿ ಸಿಂಧೂ ರೂಪೇಶ್ ಸೂಚಿಸಿದರು.ಅವರು ಸೋಮವಾರ ಬೆಳಗ್ಗೆ ೧೧.೩೦ ಗಂಟೆಗೆ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ಯುವಸಬಲೀಕರಣ ಕ್ರೀಡಾ ಇಲಾಖೆಯ ಯುವಸ್ಪಂದನ ಘಟಕದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದರು.

777
ಗ್ರಾಮಸಭೆಯಲ್ಲಿ ಯುವಸ್ಪಂದನ ಅರಿವು ಕರ‍್ಯಕ್ರಮ ಆಯೋಜಿಸುವಂತೆ ಸೂಚಿಸಿದ ಅವರು, ಎಲ್ಲ ಇಲಾಖಾ ಅಧಿಕಾರಿಗಳು ಯುವಸ್ಪಂದನ ಕರ‍್ಯಕ್ರಮ ನಡೆಸುವಂತೆ ಸುತ್ತೂಲೆ ಹೊರಡಿಸುವಂತೆ ಸೂಚಿಸಿದರು. ತಾಲೂಕು ಹಾಗೂ ಜಿಲ್ಲಾ ಕೆಡಿಪಿ ಸಭೆಯಲ್ಲಿ ಯುವಸ್ಪಂದನ ದ ಅಧಿಕಾರಿ ಗಳು ಭಾಗವಹಿಸುವಂತೆ ನರ‍್ದೇಶಿಸಿದರು. ಮತ್ತು ಇಲಾಖೆಯ ಕರ‍್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

7777
ಸಭೆಯಲ್ಲಿ ಯುವಸಬಲೀಕರಣ ಇಲಾಖೆ ಯ ಉಪನರ‍್ದೇಶಕ ಪ್ರದೀಪ್ ಡಿಸೋಜ ಮಾತನಾಡಿ ಯುವಸ್ಪಂದನ ಕರ‍್ಯಕ್ರಮ ಜಿಲ್ಲೆಯಲ್ಲಿ ಯಶಸ್ವಿಯಾಗಿ ಅನುಷ್ಠಾನವಾಗುತ್ತಿದ್ದು ಇನ್ನಷ್ಟು ಕರ‍್ಯಕ್ರಮ ಸರ‍್ಪಕವಾಗಿ ನಡೆಲಾಗುವುದು ಎಂದರು. ಜಿಲ್ಲಾ ಆರೋಗ್ಯ ಅಧಿಕಾರಿ ರಾಮಕೃಷ್ಣ, ನೆಹರು ಯುವ ಕೇಂದ್ರ ದ ಪ್ರೀತೇಶ್,
ಬೆಂಗಳೂರು ನಿಮಾನ್ಸ್ ಇದರ ಕ್ಷೇತ್ರಾಧಿಕಾರಿ ನಾಗಾರಾಜ್ ಹಾಗೂ ಪ್ರೇಮಾ, ಜಿಲ್ಲಾ ಕ್ಷೇತ್ರ ಸಂರ‍್ಕ ಅಧಿಕಾರಿ ದಿವಾಕರ್, ಯುವ ಸಮಾಲೋಚಕ ಆರ‍್ಶ್, ಯುವಪರಿರ‍್ತಕ ಶ್ರೀಕಾಂತ್ ಪೂಜಾರಿ ಬಿರಾವು, ಡೊಂಬಯ್ಯ ಇಡ್ಕಿದು, ಶಾಂತಪ್ಪ ಮುಂಡಾಜೆ, ದಿವ್ಯಾ, ರ‍್ವಿನಾ ಇದ್ದರು.ಜಿಲ್ಲೆಯ ನಾನಾ ಇಲಾಖಾ ಅಧಿಕಾರಿ ಗಳು ಭಾಗವಹಿಸಿ ಸಲಹೆ ಸೂಚನೆ ನೀಡಿದರು.

By Suddi9

Leave a Reply

Your email address will not be published. Required fields are marked *