ಮೂಡುಬಿದಿರೆ: ಯಾವುದೇ ಸಮುದಾಯದ ಸಂಘಗಳ ಸದಸ್ಯರು ಮಾತ್ರ ಕೆಲಸ ಮಾಡುವುದಲ್ಲ. ಪ್ರತಿಯೊಬ್ಬರು ಸಂಘದಲ್ಲಿ ತೊಡಗಿಸಿಕೊಂಡಾಗ ಸಮುದಾಯವನ್ನು ಮುನ್ನಡೆಸಲು ಸಾಧ್ಯ. ಆ ಮೂಲಕ ಸಮುದಾಯದ ಅಶಕ್ತರ ಏಳಿಗೆ, ಸಮಾಜಸೇವೆಯನ್ನು ಮಾಡಲು ಸಾಧ್ಯವಾಗುತ್ತದೆ. ವ್ಯಕ್ತಿ ಪ್ರತಿಷ್ಠೆ ಅಹಂ ಇದ್ದಾಗ ಸಮುದಾಯವನ್ನು ಕಟ್ಟಲು ಸಾಧ್ಯವಿಲ್ಲ. ಸಾಂಘಿಕ ಸೇವೆಯಿಂದ ಸಮುದಾಯ, ಸಮಾಜ ಸದೃಢವಾಗುತ್ತದೆ ಎಂದು ಬಾರ್ಕೂರು ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ಪ್ರಧಾನ ಕಾರ್ಯದರ್ಶಿ ಸೋಮಶೇಖರ ಎಂ.ಭಂಡಾರಿ ಹೇಳಿದರು.

Bandary Samaja
ಮೂಡುಬಿದಿರೆಯ ಭಂಡಾರಿ ಸಮಾಜಸೇವಾ ಸಂಘದ 9ನೇ ವಾರ್ಷಿಕೋತ್ಸವ ಸಮಾರಂಭವನ್ನು ಇಲ್ಲಿನ ಸಮಾಜಮಂದಿರದಲ್ಲಿ ಭಾನುವಾರ ಉದ್ಘಾಟಿಸಿ ಮಾತನಾಡಿದರು. ಭಂಡಾರಿ ಸಮುದಾಯದ ಕುಲ ಕಸುಬು ಕ್ಷೌರ ವೃತ್ತಿ ಬದುಕು ಕಂಡುಕೊಂಡ ಶ್ರಮಜೀವಿಗಳಿದ್ದಾರೆ. ನಾವು ಕೇವಲ ಕ್ಷೌರ ಕೆಲಸವನ್ನು ಮಾತ್ರ ಮಾಡುತ್ತಿಲ್ಲ, ಅದರೊಂದಿಗೆ ವ್ಯಕ್ತಿಯ ಬದುಕನ್ನು ಅಂದಗೊಳಿಸುವ ಕೆಲಸ ಮಾಡುತ್ತೇವೆ. ಕ್ಷೌರ ವೃತ್ತಿಯನ್ನು ಇಂದು ಬೇರೆ ಸಮುದಾಯದವರು ಮಾಡುತ್ತಿದ್ದಾರೆ. ವೃತ್ತಿಯೂ ಉದ್ಯಮಯಾಗಿ ಪರಿವರ್ತನೆಗೊಂಡಿದ್ದು, ಜಗತ್ತಿನ 4ನೇ ಅತೀ ದೊಡ್ಡ ಉದ್ಯಮವಾಗಿ ಗುರುತಿಸಿಕೊಂಡಿದೆ. ನಾವು ಕ್ಷೌರವೃತ್ತಿಯನ್ನು ಮಾಡುತ್ತಿದ್ದೇವೆ ಎನ್ನುವ ಕೀಳರಿಮೆ ಬೇಡ. ನಾವು ಭಂಡಾರಿ ಸಮಾಜದವರು ಎನ್ನುವ ಹೆಮ್ಮೆ, ವೃತ್ತಿ ನಿಷ್ಠೆ, ಇತರ ಸಮುದಾಯದವರಿಗೆ ನೀಡುವ ಗೌರವ ನಮ್ಮ ಸಮುದಾಯವನ್ನು ಮುನ್ನಡೆಸುತ್ತದೆ. ನಮ್ಮ ಮಾನಸಿಕ ಚಿಂತನೆ ಬದಲಾಗಬೇಕು, ವೃತ್ತಿಯಲ್ಲ ಎಂದರು.
ಮೂಡುಬಿದಿರೆ ಸಂಘದ ಅಧ್ಯಕ್ಷ ಕೆ.ಎನ್ ಪ್ರಕಾಶ್ ಭಂಡಾರಿ ಅಧ್ಯಕ್ಷತೆವಹಿಸಿದರು.
ಬ್ಯಾಂಕ್ ನಿವೃತ್ತ ಪ್ರಬಂಧಕ ವಿಶ್ವನಾಥ ಭಂಡಾರಿ, ಪುತ್ತೂರು ಭಂಡಾರಿ ಸಮಾಜ ಸೇವಾ ಸಂಘದ ಅಧ್ಯಕ್ಷ ಕೇಶವ ಭಂಡಾರಿ, ಮೂಡುಬಿದಿರೆ ಸಂಘದ ಗೌರವಾಧ್ಯಕ್ಷರಾದ ಶಾಂತ ಕೆ.ಭಂಡಾರಿ, ಸುಮಿತ್ರ ಭಂಡಾರಿ ಕಾನ, ವಸಂತಿ ಜೆ.ಭಂಡಾರಿ, ನಿಕಟಪೂರ್ವ ಅಧ್ಯಕ್ಷ ಪ್ರಶಾಂತ್ ಭಂಡಾರಿ ಉಪಸ್ಥಿತರಿದ್ದರು.
ಭಂಡಾರಿ ಸಮಾಜದ ಹಿರಿಯರಾದ ವಾಸು ಭಂಡಾರಿ ಅಲಂಗಾರ್, ಗೌರಿ ಭಂಡಾರಿ ಪುತ್ತಿಗೆ, ಲಲಿತಾ ಭಂಡಾರಿ ಸಂಗಯ್ಯಬೆಟ್ಟು ತೋಡಾರು ಅವರನ್ನು ಸನ್ಮಾನಿಸಲಾಯಿತು. 180 ಮಂದಿ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಲಾಯಿತು.
ಸುಷ್ಮಾ ಇರುವೈಲು ಕಾರ್ಯಕ್ರಮ ನಿರೂಪಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಸತೀಶ್ ಕೆ.ಭಂಡಾರಿ ಕಾರ್ಯಕ್ರಮ ನಿರೂಪಿಸಿದರು. ನಿಶ್ಮಿತಾ, ಸುಷ್ಮಾ, ರಶ್ಮಿತಾ ಸನ್ಮಾನಪತ್ರ ವಾಚಿಸಿದರು. ಕೋಶಾಧಿಕಾರಿ ಗುರುಪ್ರಸಾದ್ ಭಂಡಾರಿ ವಂದಿಸಿದರು.
ಸಭಾ ಕಾರ್ಯಕ್ರಮದ ಮೊದಲು ಸಾರ್ವಜನಿಕ ಸತ್ಯನಾರಾಯಣ ಪೂಜೆ ನೆರವೇರಿತು. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ನೃತ್ಯ ವೈವಿಧ, ಮೂಡುಬಿದಿರೆಯ ಧಿಗಿಣ ದಿವಿಜ ಮಕ್ಕಳ ತಂಡದಿಂದ ಶ್ರೀದೇವಿ ವೈಷ್ಣವಿ ಮಹಾತ್ಮೆ, ಸಾಯಂಕಾಲ ಸ್ಕಂದ ಕಲಾವಿದೆರ್ ಬೆದ್ರ ತಂಡದಿಂದ `ಆರ್ ಉಲ್ಲೆರ್’ ತುಳು ನಾಟಕ ಪ್ರದರ್ಶನಗೊಂಡಿತು.

By Suddi9

Leave a Reply

Your email address will not be published. Required fields are marked *