ಜಲ್ಲಿಹುಡಿ ತುಂಬಿದ್ದ ಲಾರಿ, ಎದುರಿನಿಂದ ಬರುತ್ತಿದ್ದ `407′ ಟೆಂಪೋ ಹಾಗೂ ಕಾರಿಗೆ ಡಿಕ್ಕಿ
ಗುರುಪುರ : ಗುರುಪುರ ಕಡೆಯಿಂದ ವಾಮಂಜೂರಿನತ್ತ ವೇಗವಾಗಿ ಸಾಗುತ್ತಿದ್ದ ಜಲ್ಲಿಹುಡಿ ತುಂಬಿದ್ದ ಲಾರಿ, ಎದುರಿನಿಂದ ಬರುತ್ತಿದ್ದ `407′ ಟೆಂಪೋ ಹಾಗೂ ಕಾರಿಗೆ ಡಿಕ್ಕಿ ಹೊಡೆದು ರಸ್ತೆಯಲ್ಲಿ ಪಲ್ಟಿ ಹೊಡೆದ ಘಟನೆ ಶುಕ್ರವಾರ ಕುಕ್ಕುದಕಟ್ಟೆ ತಿರುವಿನ ಬಳಿ ಸಂಭವಿಸಿತು.
ಟೆಂಪೋಗೆ ಡಿಕ್ಕಿ ಹೊಡೆದ ಲಾರಿ, ಬಳಿಕ ಎದುರಿನಿಂದ ಬರುತ್ತಿದ್ದ ಬೆಲೆನೋ ಕಾರಿಗೆ ಅಪ್ಪಳಿಸಿದ್ದು, ಕಾರು ರಸ್ತೆಯಿಂದ ಕೆಳಗೆ ಉರುಳಿ ಅಪ್ಪಚ್ಚಿಯಾಗಿದೆ. ಕಾರು ಗಂಜಿಮಠದ ಬಾಲಕೃಷ್ಣ ಶೆಟ್ಟಿಯವರದ್ದಾಗಿದ್ದು, ತಕ್ಷಣ ಕಾರಿನ ಏರ್‍ಬ್ಯಾಗ್ ತೆರೆದುಕೊಂಡ ಪರಿಣಾಮ ಶೆಟ್ಟಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳೀಯರು ಧಾವಿಸಿ, ಅವರನ್ನು ಕಾರಿನಿಂದ ಹೊರಗೆ ತಂದಿದ್ದಾರೆ. ಮೈಮೇಲೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ಸಾಗಿಸಲಾಗಿದೆ.
ಒಂದೊಮ್ಮೆ ರಸ್ತೆಯಲ್ಲಿ ಅಡ್ಡ ಬಿದ್ದ ಲಾರಿ ಕೆಳಗೆ ಜಾರುತ್ತಿದ್ದರೆ ಅಪಘಾತದ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇತ್ತು. ಲಾರಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದರೆ, ಲಾರಿ ಪಲ್ಟಿ ಹೊಡೆಯುತ್ತಲೇ ಅದಸರಲ್ಲಿದ್ದ ಮತ್ತೊಬ್ಬ ವ್ಯಕ್ತಿ ರಸ್ತೆಯಿಂದ ಕೆಲಗೆ ಜಂಪ್ ಹೊಡೆದು ಕೈಗೆ ಗಾಯಮಾಡಿಕೊಂಡಿದ್ದಾರೆ.
ಸ್ಥಳಕ್ಕಾಗಮಿಸಿ ಮಹಜರು ನಡೆಸಿದ ಬಜ್ಪೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಫಗಾತ ಸಂಭವಿಸಿದ ಲಾರಿಯನ್ನು ಕ್ರೇನ್ ಬಳಸಿ ರಸೆಯಿಂದ ತೆರವುಗೊಳಿಸಲಾಗಿದ್ದು, ಈ ವೇಳೆ ಕೆಳಗಿನ ಕಚ್ಚಾ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡಲಾಯಿತು.