ಪೊಳಲಿ: ಶ್ರೀ ರಾಜರಾಜೇಶ್ವರಿ ವೇದಿಕೆ ಹಾಗೂ ಶ್ರೀ ದುರ್ಗಾಪರಮೇಶ್ವರಿ ವೇದಿಕೆಯಲ್ಲಿ ನಾನಾ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗುತ್ತಿದ್ದು ಜನಮನಸೂರೆಗೊಂಡವು.
ಮಾ.4ರ ಸಂಜೆ ಸಂಜೆ 7ರಿಂದ ಆಳ್ವಾಸ್ ಪ್ರತಿಷ್ಠಾನದ 350 ವಿದ್ಯಾರ್ಥಿಗಳಿಂದ ಆಳ್ವಾಸ್ ಸಾಂಸ್ಕøತಿಕ ವೈಭವ ಜರುಗಿದ್ದು, ವಿಶೇಷ ಆಕರ್ಷಣೆ ಒದಗಿಸಿದ್ದವು.
ದೇಶ-ವಿದೇಶಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿದ್ಯಾರ್ಥಿಗಳು ನಡೆಸಿಕೊಟ್ಟ ಮಲ್ಲಕಂಬ ಕಸರತ್ತು ಮೈನವಿರೇಳಿಸಿತ್ತು. ಇದರೊಂದಿಗೆ ಹಗ್ಗದೊಂದಿಗೆ ನಾನಾ ಕಸರತ್ತುಗಳನ್ನು ನಡೆಸಿಕೊಟ್ಟರು.
ಡೋಲು ಕುಣಿತ, ಮಣಿಪುರ ಶೈಲಿ-ಪಂಜಾಬಿ ಶೈಲಿಯ ನೃತ್ಯಗಳು ವಿಶೇಷ ಆಕರ್ಷಣೆ ಒದಗಿಸಿದ್ದವು. ರಾತ್ರಿ 11 ಗಂಟೆಯವರೆಗೆ ಆಳ್ವಾಸ್ ಸಾಂಸ್ಕøತಿಕ ವೈಭವ ಜರುಗಿದವು.











