ಮೂಡುಬಿದಿರೆ: ಪದವಿ ಪೂರ್ವ ಶಿಕ್ಷಣ ಇಲಾಖೆ, ಗದಗ ಹಾಗೂ ಸನ್ಮಾರ್ಗ ಪ.ಪೂ. ಕಾಲೇಜು, ಗದಗ ಇವರ ಆಶ್ರಯದಲ್ಲಿ ರಾಜ್ಯಮಟ್ಟದಲ್ಲಿ ನಡೆದ ಕುಸ್ತಿ ಪಂದ್ಯಾಟದಲ್ಲಿ ಬಾಲಕಿಯರ 9 ವಿಭಾಗದಲ್ಲಿ ನಡೆದ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿದ ಆಳ್ವಾಸ್ ಪ.ಪೂ ಕಾಲೇಜು ತಂಡ 4 ವಿಭಾಗದಲ್ಲಿ ಚಿನ್ನದ ಪದಕ ಮತ್ತು 3 ಬೆಳ್ಳಿ ಪದಕ ಮತ್ತು 2 ವಿಭಾಗದಲ್ಲಿ ಕಂಚಿನ ಪದಕಗಳನ್ನು ಪಡೆದು ಪ್ರಶಸ್ತಿಯನ್ನು ಪಡೆದರು.

ಅಸ್ನಾ ಶರೀನ್(65 ಕೆಜಿ ವಿಭಾಗ),ಅರ್ಚನಾ(68 ಕೆಜಿ), ಅಕ್ಷತಾ ಬುರ್ಲಿ( 72 ಕೆಜಿ) ಪ್ರಥಮ ಸ್ಥಾನ, ಚಂದ್ರಿಕಾ(50 ಕೆಜಿ), ತನುಜಾ ತಾನಾಜಿ(53 ಕೆಜಿ), ಭಾರತಿ (55 ಕೆಜಿ), ವಿನುಶ್ರೀ 63 ಕೆಜಿ ದ್ವಿತೀಯ ಸ್ಥಾನ ಹಾಗೂ ಗಾಯತ್ರಿ(57 ಕೆಜಿ), ಡೆಲ್ಫಿ ವರ್ಗೀಸ್ (59 ಕೆಜಿ) ತೃತೀಯ ಸ್ಥಾನ ಪಡೆದು ಪ್ರಶಂಸೆಗೆ ಪಾತ್ರರಾಗಿದ್ದಾರೆ.
