hqdefault

ಮಂಗಳೂರು: ಅಡ್ಯಾರ್ ಗಾರ್ಡನ್‌ನಲ್ಲಿ ಮೇ 27ರಂದು ನಡೆಯಲಿರುವ “ಪಟ್ಲ-ಸಂಭ್ರ್ರಮ” ಕಾರ್ಯಕ್ರಮದಲ್ಲಿ ಯಕ್ಷಧ್ರುವ ಪಟ್ಲ ಪ್ರಕಾಶನ ಪೂರ್ವದಲ್ಲಿ ಪ್ರಕಟಿಸಿದ ಬೊಟ್ಟಿಕೆರೆ ಪುರುಷೋತ್ತಮ ಪೂಂಜರ ಅಂಬುರುಹ ಕುಶ-ಲವ ಎನ್ನುವ ಎರಡು ಯಕ್ಷಗಾನ ಪ್ರಸಂಗ ಸಂಪುಟಗಳು ಹಾಗೂ ಬಲಿಪ ನಾರಾಯಣ ಭಾಗವತರ ’ಜಯಲಕ್ಷ್ಮೀ’ ಪ್ರಸಂಗ ಸಂಪುಟಗಳು ಶೇ.50 ವಿನಾಯಿತಿ ದರದಲ್ಲಿ ಯಕ್ಷಗಾನಸಕ್ತರಿಗೆ ಲಭ್ಯವಾಗಲಿದೆ.

ಬಿಡುಗಡೆಯಾಗಲಿರುವ ಡಾ. ಎನ್. ನಾರಾಯಣ ಶೆಟ್ಟಿ ಶಿಮಂತೂರು ಅವರ ’ಛಂದಸ್ಪತೀ’ ಹಾಗೂ ಗಣೇಶ ಕೊಲೆಕ್ಕಾಡಿ ಅವರ “ಪದ್ಮಾಂಶು” ಯಕ್ಷಗಾನ ಪ್ರಸಂಗ ಸಂಪುಟಗಳ ಶೇ.50ರಷ್ಟು ವಿನಾಯಿತಿ ದರದಲ್ಲಿ ಮಾರಾಟ ಮಾಡಲಾಗುವುದು ಎಂದು ಪಟ್ಲ ಪ್ರಕಾಶನದ ಕದ್ರಿ ನವನೀತ ಶೆಟ್ಟಿ ತಿಳಿಸಿದ್ದಾರೆ.

ಭಾಗವತ ಪಟ್ಲ ಸತೀಶ್ ಶೆಟ್ಟಿಯವರು ಯಕ್ಷರಂಗದಲ್ಲಿ ಮಾರ್ಗದರ್ಶನ ಮಾಡಿ ಬೆಳೆಸಿದ ಯಕ್ಷರಂಗದ ಶ್ರೇಷ್ಠ ಯಕ್ಷ ಸಾಹಿತಿಗಳನ್ನು ಅವರ ಕೃತಿಗಳನ್ನು ಪ್ರಕಟಿಸುವ ಮೂಲಕ ಸ್ಮರಿಸಿ ಗುರುಸೇವೆ ಮಾಡುತ್ತಿದ್ದಾರೆ. ಸಾವಿರಾರು ಪ್ರದರ್ಶನಗಳನ್ನು ಕಂಡ ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ ಪ್ರಸಂಗದ ಮೂಲ ಪ್ರತಿಯ ಎಲ್ಲಾ ಪದ್ಯಗಳನ್ನು “ಛಂದಸ್ಪತೀ” ಪ್ರಸಂಗ ಸಂಪುಟದಲ್ಲಿ ಕಾಣಬಹುದಾಗಿದ್ದು, ಈ ಸಂಪುಟಗಳು ಸಂಗ್ರಹಯೋಗ್ಯ ಮಹಾ ಕೃತಿಗಳಾಗಿವೆ.

By suddi9

Leave a Reply

Your email address will not be published. Required fields are marked *