4b892c72-3a6b-4e4d-ac45-396354c2da7d

ವಿಟ್ಲ: ಬೈಕ್ ಸವಾರನೊಬ್ಬ ಬಸ್ ನಡಿಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟ ಘಟನೆ ವಿಟ್ಲ – ಮಂಗಳೂರು ರಸ್ತೆಯ ಒಕ್ಕೆತ್ತೂರು ಎಂಬಲ್ಲಿ ಭಾನುವಾರದಂದು ನಡೆದಿದೆ.

ಮೃತನನ್ನು ವಿಟ್ಲ ಕಸಬಾ ಗ್ರಾಮದ ಒಕ್ಕೆತ್ತೂರು ನಿವಾಸಿ ಕುಂಞಿಮೋನು ಎಂಬವರ ಪುತ್ರ ಮೊಹಮ್ಮದ್ ಅಫ್ರಿದ್(17) ಎಂದು ಗುರುತಿಸಲಾಗಿದೆ.

ವಿಟ್ಲದ ಚಿನ್ನಾಭರಣ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದ ಈತ ಭಾನುವಾರದಂದು ತನ್ನ ಸ್ನೇಹಿತನೊಂದಿಗೆ ಹಿಂಬದಿ ಸವಾರನಾಗಿ ಬೈಕಿನಲ್ಲಿ ವಿಟ್ಲ ಕಡೆಗೆ ತೆರಳುತ್ತಿದ್ದ ವೇಳೆ ಒಕ್ಕೆತ್ತೂರು ಸೇತುವೆ ಬಳಿಯ ಅಪಾಯಕಾರಿ ತಿರುವಿನಲ್ಲಿ ವಿರುದ್ಧ ದಿಕ್ಕಿನಿಂದ ಬಂದ ಜೀಪಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಅಫ್ರಿದ್ ರಸ್ತೆಗೆ ಎಸೆಯಲ್ಪಟ್ಟಿದ್ದಾನೆ. ಅದೇ ಸಂದರ್ಭದಲ್ಲಿ ವಿಟ್ಲ ಕಡೆಯಿಂದ ಬಂದ ಖಾಸಗಿ ಬಸ್ಸು ಆತನ ತಲೆಯ ಮೇಲೆ ಹರಿದು ಅಫ್ರಿದ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಬೈಕ್ ಸವಾರ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾನೆ.

ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ..

By suddi9

Leave a Reply

Your email address will not be published. Required fields are marked *