ಮಂಗಳೂರು: ಮಂಗಳೂರು ಆಕಾಶವಾಣಿ ಕೇಂದ್ರದ ತುಳು ವಿಭಾಗದ “ಸ್ವರಮಂಟಮೆ” ನೇರಪ್ರಸಾರದ 17ನೇ ಸಂಚಿಕೆಯಲ್ಲಿ ಮೇ 5ರಂದು 10;30ರಿಂದ 11;30ರವೆರೆಗೆ ಕೆ.ಟಿ.ಆಳ್ವ ಮತ್ತು ಚಂದ್ರಹಾಸ ಕಣಂತೂರು ಬರೆದ “ತುಳು ಬಾಸೆದ ತಿರ್ಲ್” ಎಂಬ ತುಳು ಕೃತಿ ಅನಾವರಣ ನಡೆಯಲಿದೆ.
ಈ ವೇಳೆ ಪ್ರಾಂಶುಪಾಲ ಡಾ.ಎನ್.ಇಸ್ಮಾಯೀಲ್ ಕೃತಿ ಬಿಗುಗಡೆಗೊಳಿಸಲಿದ್ದು, ಸಾಹಿತಿ ಡಾ.ಕಿಶೋರ ರೈ ಶೇಣಿ ಕೃತಿ ವಿಮರ್ಶೆ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ನೇರ ಸಂವಾದ ನಡೆಸಲು ನಿಲಯದ ದೂ.ಸಂ.0824-2211999 ಅನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.
