bjp-serpade

ಮಂಗಳೂರು: ಜಿಲ್ಲಾ ಕಾಂಗ್ರೆಸ್‌ ಕಾರ್ಮಿಕ ವಿಭಾಗದ ಪ್ರಧಾನ ಕಾರ್ಯದರ್ಶಿ ಜಗರಾಜ್‌ ರೈ ಹಾಗೂ ಕಾಂಗ್ರೆಸ್‌ ಮುಖಂಡ ಗಜರಾಜ್‌ ಕುಂದರ್‌ ಅವರು ಸಹಿತ 70 ಕ್ಕೂ ಅಧಿಕ ಕಾಂಗ್ರೆಸ್‌ ಕಾರ್ಯಕರ್ತರು ಬಿಜೆಪಿ ಮಂಗಳೂರು ದಕ್ಷಿಣದ ಚುನಾವಣಾ ಕಚೇರಿಯಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು.

ಲೋಬೋ ಅವರ ಜಾತಿವಾದ ಮತ್ತು ಕಾರ್ಯಕರ್ತರನ್ನು ಕಡೆಗಣಿಸುವ ಅವರ ಮನೋಭಾವ ಮತ್ತು ಸಿದ್ಧಾಂತಗಳೊಂದಿಗೆ ಹೊಂದಾಣಿಕೆಯ ರೀತಿ ಇವೆಲ್ಲದರಿಂದ ನೊಂದುಕೊಂಡು ಕಾಂಗ್ರೆಸ್‌ನ್ನು ತ್ಯಜಿಸುವುದಾಗಿ ಕಾಂಗ್ರೆಸ್‌ ಮುಖಂಡ ಗಜರಾಜ್‌ ಕುಂದರ್‌  ಹೇಳಿಕೆ ನೀಡಿದ್ದಾರೆ.

ಇದೇ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ಡಿ. ವೇದವ್ಯಾಸ್‌ ಕಾಮತ್‌, ಭಾಸ್ಕರ್‌ ಚಂದ್ರ ಶೆಟ್ಟಿ, ರತ್ನಾಕರ್‌ ನಾಯಕ್‌ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *