hanging

ಮೈಸೂರು: ವರುಣಾ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಬಿ.ಎಸ್.ವೈ ಪುತ್ರ ವಿಜೇಂಯಂದ್ರ ಅವರಿಗೆ ಟಿಕೆಟ್ ತಪ್ಪಿದ ಹಿನ್ನೆಲೆಯಲ್ಲಿ ಮನನೊಂದ ವಿಜೇಯಂದ್ರ ಅಭಿಮಾನಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರು ಜಿಲ್ಲೆ ವರಣಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸರಗೂರಿನಲ್ಲಿ ನಡೆದಿದೆ.

ಸರಗೂರು ಬಸವಣ್ಣ ಆತ್ಮಹತ್ಯೆ ಮಾಡಿಕೊಂಡ ವಿಜೇಯೇಂದ್ರ ಅಭಿಮಾನಿಯಾಗಿದ್ದು, ವರುಣಾ ವಿಧಾನಸಭಾ ಕ್ಷೇತ್ರದಿಂದ ತಮ್ಮ ನೆಚ್ಚಿನ ನಾಯಕನಿಗೆ ಟಿಕೆಟ್ ತಪ್ಪಿದ್ದ ಸುದ್ದಿ ಕೇಳಿದ ಮೃತ ಬಸವಣ್ಣ ಕಳೆದ ಮೂರು ದಿವಸದಿಂದ ಯಾರ ಬಳಿಯು ಮಾತನಾಡದೇ ಏಕಾಂಗಿಯಾಗಿ ಇದ್ದ ಎನ್ನಲಾಗಿದೆ.

ಈ ಬಗ್ಗೆ ಬಸವಣ್ಣನ ಆಪ್ತರು ಕರೆದು ಬುದ್ಧಿ ಹೇಳಿದರು ಕೂಡ ಬಸವಣ್ಣ ಬೇಸರಗೊಂಡು ನೇಣಿಗೆ ಶರಣಾಗಿದ್ದಾರೆ ಎನ್ನಲಾಗಿದೆ.

ಘಟನ ಸ್ಥಳಕ್ಕೆ ಎಚ್.ಡಿ ಕೋಟೆ ಪೋಲಿಸ್ ಠಾಣಾ ಸಿಬ್ಬಂದಿ ಆಗಮಿಸಿ ವಿಚಾರಣೆ ನಡೆಸುತ್ತಿದ್ದಾರೆ.

By suddi9

Leave a Reply

Your email address will not be published. Required fields are marked *