ಶಿರಸಿ : ಶಿರಸಿಯಲ್ಲಿ ಸಂವಿಧಾನ ಉಳಿವಿಗಾಗಿ ಕರ್ನಾಟಕ ಆಂದೋಲನ ನಗರದಲ್ಲಿ ಏ. 5 ರಂದು ಆರಂಭವಾಗಲಿದ್ದು, ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಈ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ ಎಂದು ಕರ್ನಾಟಕ ಕೋಮುಸೌಹಾರ್ದ ವೇದಿಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಲ್. ಅಶೋಕ್ ತಿಳಿಸಿದ್ದಾರೆ.
ಅಂಬೇಡ್ಕರರ ಸಂವಿಧಾನ ವಿರೋಧಿಸುವವರಿಗೆ ದೇಶವನ್ನಾಳುವ ಹಕ್ಕಿಲ್ಲ ಮತ್ತು ಗಾಂಧಿ, ಗೌರಿಯನ್ನು ಕೊಂದವರಿಗೆ ನಮ್ಮ ಓಟು ಇಲ್ಲ ಎಂಬ ಘೋಷವಾಕ್ಯದೊಂದಿಗೆ ಸಂವಿಧಾನ ಉಳಿವಿಗಾಗಿ ಕರ್ನಾಟಕ ಆಂದೋಲನ ಹಮ್ಮಿಕೊಳ್ಳಲಾಗಿದೆ. ಇನ್ನು ಸಂವಿಧಾನ ಬದಲಿಸಬೇಕು ಎಂಬ ಹೇಳಿಕೆ ನೀಡಿದ ಅನಂತ್ ಕುಮಾರ್ ಹೆಗಡೆ ಇದೇ ಕ್ಷೇತ್ರದವರಾಗಿದ್ದರಿಂದ ಶಿರಸಿಯಿಂದಲೇ ಆಂದೋಲನ ಪ್ರಾರಂಭಿಸುತ್ತೇವೆ ಎಂದು ಹೇಳಿದ್ದಾರೆ.

