images

ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಮತ್ತು ಮಂಗಳೂರು ಮಹಾನಗರ ಪಾಲಿಕೆಯ ಜಂಟಿ ಆಶ್ರಯದಲ್ಲಿ ಮಾ.24ರಿಂದ 31ರವರೆಗೆ ನಗರದ ಪುರಭವನದಲ್ಲಿ ತುಳು ನಾಟಕ ಪರ್ಬ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಅಕಾಡಮಿಯ ಅಧ್ಯಕ್ಷ ಎ.ಸಿ. ಭಂಡಾರಿ ತಿಳಿಸಿದ್ದಾರೆ.

ನಗರದಲ್ಲಿ  ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮಾ. 24ರಂದು ಸಂಜೆ 4 ಗಂಟೆಗೆ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. ಸಂಜೆ 6 ಗಂಟೆಗೆ ಪ್ರಥಮ ದಿನದ ನಾಟಕ ಪ್ರದರ್ಶನ ಹಾಗೂ ಸಂಸ್ಮರಣೆ ನಡೆಯಲಿದೆ. ನಂತರ ಪ್ರತಿದಿನ ಸಂಜೆ 6 ಗಂಟೆಗೆ ನಾಟಕಕಾರರ ಸಂಸ್ಮರಣೆ ಹಾಗೂ 6:30ಕ್ಕೆ ನಾಟಕ ಪ್ರದರ್ಶನ ನಡೆಯಲಿದೆ. ಮಾ.31ರಂದು ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. 6 ಗಂಟೆಗೆ ಕೊನೆಯ ನಾಟಕ ಪ್ರದರ್ಶನ ಹಾಗೂ ಸಂಸ್ಮರಣೆ ನಡೆಯಲಿದೆ ಎಂದರು.

ಮಾ. 24ರಂದು ವಿಶು ಕುಮಾರ್ ಬರೆದಿರುವ ಕೋಟಿ-ಚೆನ್ನಯ, 25ರಂದು ಯು.ಆರ್. ಚಂದರ್ರವರ ಕೋರ್ದಬ್ಬು – ತನ್ನಿಮಾನಿಗ, 26ರಂದು ಶಾಂತಾರಾಮ್ ಕಲ್ಲಡ್ಕರವರ ಕುಂಕುಮ, 27ರಂದು ಮಚ್ಚೇಂದ್ರನಾಥ ಪಾಂಡೇಶ್ವರ ಅವರ ಪೊತ್ತು ಕಂತ್ಂಡ್, 28ರಂದು ಕೆ.ಎನ್. ಟೇಲರ್ರವರ ತಮ್ಮಲೆ ಅರ್ವತ್ತನ ಕೋಲ, 29ರಂದು ಕೆ.ಬಿ. ಭಂಡಾರಿಯವರ ನಾರದೆರೆನ ವಕಾಲತ್, 30ರಂದು ರಾಮ ಕಿರೋಡಿಯನ್ರವರ ಕಾನೂನುದ ಕಣ್ಣ್, 31ರಂದು ಉಳ್ಳಾಲ ಮಚ್ಚೇಂದ್ರನಾಥ್(ಮೂಲ ರಚನೆ: ಎನ್. ಗೋಪಾಲಕೃಷ್ಣ) ಅವರ ಲಚ್ಚು ನಾಟಕಗಳು ಪ್ರದರ್ಶನಗೊಳ್ಳಲಿವೆ ಎಂದು ಮಾಹಿತಿ ನಿಡಿದರು.

By Suddi9

Leave a Reply

Your email address will not be published. Required fields are marked *