Fake_certificate

ಮಂಗಳೂರು: ನಗರದ ಹೊರವಲಯದ ತೊಕ್ಕೊಟ್ಟುವಿನಲ್ಲಿ ನಕಲಿ ಅಂಕಪಟ್ಟಿಯ ಬೃಹತ್ ಜಾಲ ಪತ್ತೆಯಾಗಿದ್ದು, ಮಂಗಳೂರು ಸಿಸಿಬಿ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ.

ಉಳ್ಳಾಲದ ಟಿ ಸಿ ರಸ್ತೆಯ ನಿವಾಸಿ ಗೋಡ್ವಿನ್ ಡಿಸೋಜ ಬಂಧಿತ ಆರೋಪಿ. ಬಂಧಿತ ಆರೋಪಿಯ ಬಳಿಯಿಂದ ನಕಲಿ ಸರ್ಟಿಫಿಕೇಟ್, ಲ್ಯಾಪ್ ಟಾಪ್, 3 ನಕಲಿ ಸೀಲು, ಪ್ರಿಂಟರ್, ಪೇಪರ್, ಐಪೋನ್ ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.

ಎಂಐಟಿಎಸ್ ಎಂಬ ಸಂಸ್ಥೆಯಲ್ಲಿ ನಕಲಿ ಅಂಕಪಟ್ಟಿ ಜಾಲ ಕಾರ್ಯಾಚರಿಸುತ್ತಿತ್ತು ಎನ್ನಲಾಗಿದೆ. ಎಸೆಸೆಲ್ಸಿ, ಪಿ ಯು ಸಿ ಡಿಗ್ರಿ, ಡಿಪ್ಲೊಮಾ ಕೋರ್ಸ್ ಗಳ ನಕಲಿ ಅಂಕಪಟ್ಟಿ ನೀಡುತ್ತಿದ್ದರು. ಎಸೆಸೆಲ್ಸಿ, ಪಿ ಯುಸಿಗೆ ಪ್ರಮಾಣ ಪತ್ರಗಳಿಗೆ 10 ಸಾವಿರ ರೂ ಪಡೆಯುತ್ತಿದ್ದರು. ಡಿಗ್ರಿ, ಡಿಪ್ಲೊಮಾ ಅಂಕಪಟ್ಟಿಗೆ  45ಸಾವಿರ  ಪಡೆಯುತ್ತಿದ್ದರು. ಮಂಗಳೂರು ಪಬ್ಲಿಕ್ ಸ್ಕೂಲ್ ಎಂಬ ನಕಲಿ ಹೆಸರಿನಲ್ಲಿ ನಕಲಿ ದಾಖಲೆ ನೀಡುತ್ತಿದ್ದರು. ಈವರೆಗೆ 150 ಕ್ಕೂ ಹೆಚ್ಚು ಮಂದಿಗೆ ನಕಲಿ ಅಂಕಪಟ್ಟಿ ನೀಡಿದ್ದಾರೆ ಎಂದು ತಿಳಿದುಬಂದಿದೆ.

By Suddi9

Leave a Reply

Your email address will not be published. Required fields are marked *