viewimage

ಚಾಮರಾಜನಗರ: ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಮುಖಂಡರ ಗೂಂಡಾಗಿರಿ ಮುಂದುವರಿದಿದ್ದು, ಕ್ಷುಲ್ಲಕ ಕಾರಣಕ್ಕೆ ಬಸ್ ನಿರ್ವಾಹಕನ ಕರ್ತವ್ಯಕ್ಕೆ ಅಡ್ಡಿಪಡಿಸಿದಲ್ಲದೆ ಆತನ ಮೇಲೆ ಮನಬಂದಂತೆ ಹಲ್ಲೆ ನಡೆಸಿದ ಘಟನೆ ನಗರದ ಯಳಂದೂರು ಬಳಿ ನಡೆದಿದೆ.

ಹಲ್ಲೆಗೊಳಗಾದ  ಬಸ್ ನಿರ್ವಾಹಕನನ್ನು ರಾಜು ಎಂದು ಗುರುತಿಸಲಾಗಿದೆ.

ರಾಜು ಅವರು ಬಸ್ ನಲ್ಲಿ ಪ್ರಯಾಣಿಕರನ್ನು ಮುಂದೆ ಕಳುಹಿಸುತ್ತಿದ್ದ ವೇಳೆ ಕಾಂಗ್ರೆಸ್ ಮುಖಂಡ ಮಹಾದೇವ ಸ್ವಾಮಿಯ ಮೊಬೈಲ್ ಕೆಳಗೆ ಬಿದ್ದಿದೆ. ಇದರಿಂದ ರೊಚ್ಚಿಗೆದ್ದ  ಮಹಾದೇವಸ್ವಾಮಿ ಮತ್ತವರ ಬೆಂಬಲಿಗರು  ರಾಜು ಮೇಲೆ ಹಲ್ಲೆ ನಡೆಸಿದಲ್ಲದೆ, ಪೊಲೀಸ್ ಠಾಣೆಗೆ ಬಲವಂತವಾಗಿ ಕರೆದೊಯ್ದು, ದೂರು ದಾಖಲಿಸಲು ಯತ್ನಿಸಿದ್ದಾರೆ ಎಂದು ತಿಳಿದು ಬಂದಿದೆ.

ಹಲ್ಲೆ ನಡೆದ ಬಗ್ಗೆ ದೂರು ದಾಖಲಿಸಿದ್ದರೆ  ನಿನ್ನನ್ನು ಈ ಮಾರ್ಗದಲ್ಲಿ ಸಂಚರಿಸಲು ಬಿಡುವುದಿಲ್ಲ ಎಂದು ರಾಜು ಅವರಿಗೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

By suddi9

Leave a Reply

Your email address will not be published. Required fields are marked *