IMG-20180303-WA0227-300x225
ಬಾಗಲಕೋಟೆ: ಶಾರ್ಟ್ ಸರ್ಕ್ಯೂಟ್ ನಿಂದ ಎರಡು ಅಂಗಡಿಗಳು  ಬೆಂಕಿಗಾಹುತಿಯಾಗಿರುವ ಘಟನೆ ಜಿಲ್ಲೆಯ ಜಮಖಂಡಿಯ ಅಶೋಕ ವೃತ್ತದ ಬಳಿ  ಶನಿವಾರ ಬೆಳಗಿನ ಜಾವ ನಡೆದಿದೆ.ಪಾಪ್ಯುಲರ್ ಲಾಡ್ಜನ ವ್ಯಾಪಾರ ಮಳೆಗೆಗಳಲ್ಲಿರುವ ತುಕಾರಾಮ ಜನವಾಡಅವರಿಗೆ ಸೇರಿದ ನಂದಿ ಮೆಡಿಕಲ್ ಶಾಪ್ ನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹತ್ತಿಕೊಂಡಿದ್ದು, ಶಾಪ್ ನಲ್ಲಿದ್ದ ಫ್ರಿಜ್ ಬ್ಲಾಸ್ಟಆಗಿ ಕ್ರಮೇಣ ಮೊಬೈಲ್ ಅಂಗಡಿಯಲ್ಲಿಯೂ ಬೆಂಕಿ ಆವರಿಸಿದೆ. ಎರಡು ಅಂಗಡಿಗಳಲ್ಲಿ ಸೇರಿ ಅಂದಾಜು 20 ಲಕ್ಷಕ್ಕೂ ಹೆಚ್ಚು ರೂ. ಹಾನಿಯಾಗಿದೆ.

ಸುದ್ದಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅದೃಷ್ಟವಶಾಹತ್ ಪಕ್ಕದಲ್ಲಿಯೇ ಕಾರ್ಪೋರೇಶನ ಬ್ಯಾಂಕ್ ಇದ್ದು, ಇದಕ್ಕೆ ಯಾವುದೇ ಹಾನಿಯಾಗಿಲ್ಲ.

By suddi9

Leave a Reply

Your email address will not be published. Required fields are marked *