ಬೈಂದೂರು: ಜಂಇಯ್ಯತುಲ್ ಫಲಾಹ್ ಬೈ೦ದೂರ್ ತಾಲೂಕು ಪದಗ್ರಹಣ ಅಂಗವಾಗಿ ಜಂಇಯ್ಯತುಲ್ ಫಲಾಹ್ ಬೈಂದೂರು ಘಟಕ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಸಂಯುಕ್ತಾಶ್ರಯದಲ್ಲಿ ರೆಡ್ ಕ್ರಾಸ್ ಸೊಸೈಟಿ ಕುಂದಾಪುರ ಸಹಯೋಗದಲ್ಲಿ ಫೆ.18ರಂದು ಬೃಹತ್ ರಕ್ತದಾನ ಶಿಬಿರ ಇಲ್ಲಿನ ರಾಷ್ಟ್ರೀಯ ಹೆದ್ದಾರಿ 66 ರ ಸೌಖ್ಯ ಎಜುಕೇಶನ್ ಇನ್ಸ್ ಟಿಟ್ಯೂಟ್ ಆಯೋಜಿಸಲಾಗಿದೆ.
ಅಂದು ಬೆಳಗ್ಗೆ 8:00 ರಿಂದ ಪ್ರಾರಂಭಗೊಳ್ಳುವ ಈ ಶಿಬಿರ ಮಧ್ಯಾಹ್ನ 1:0 ರವರೆಗೆ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

