ಗುರುಪುರ-ಕೈಕಂಬ: ಸುನ್ನೀ ಜಂ-ಇಯ್ಯತುಲ್ ಮುಅಲ್ಲಿಮೀನ್ ಕೈಕಂಬ ರೇಂಜ್ ಸಮಿತಿಯಿಂದ ಆಯೋಜಿಸಿದ್ದ ವಿವಿಧ ವಿಷಯಗಳಗೊಂಡ ‘ಮುಅಲ್ಲಿಂ ಸೆಮಿನಾರ್’ ಕಾರ್ಯಕ್ರಮವು ಸೋಮವಾರ ಇಲ್ಲಿನ ಕಂದಾವರಪದವಿನ ಅಲ್ ಮದ್ರಸತುಲ್ ಬದ್ರಿಯಾದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಯೂಸುಫ್ ಸಖಾಫಿ ಬೊಲ್ಮಾರ್ ಉದ್ಘಾಟಿಸಿದ್ದು, ಎಸ್ ಜೆಎಂ ಕೈಕಂಬ ರೇಂಜ್ ಅಧ್ಯಕ್ಷ ಬದ್ರುದ್ದೀನ್ ಹಝ್ಹರಿ ಅಲ್ ಕಾಮಿಲ್ ಅಧ್ಯಕ್ಷತೆವಹಿಸಿದ್ದರು. ಇದೇ ವೇಳೆ ಮುಖ್ಯ ಅಥಿತಿಗಳಾಗಿ ಎಸ್ ಜೆಎಂ ರಾಜ್ಯಾಧ್ಯಕ್ಷ ಆತೂರು ಸಾದ್ ಮುಸ್ಲಿಯಾರ್ ಭಾಗವಹಿಸಿದ್ದರು ಎಂದು ಎಸ್ ಜೆಎಂ ಪ್ರಧಾನ ಕಾರ್ಯದರ್ಶಿ ಎಸ್.ಮದನಿ ಕಂದಾವರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
