202112
ಶಹಾಪುರ: ಸಾಲಭಾದೆಯಿಂದ ರೈತನೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಮದ್ದರಕಿ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ.

ಮೃತರನ್ನು ಮದ್ದರಕಿ ಗ್ರಾಮದ ನಿವಾಸಿ ಭೀಮಪ್ಪ ವರ್ಚನಳ್ಳಿ (45) ಎಂದು ಗುರುತಿಸಲಾಗಿದೆ.

ಭೀಮಪ್ಪ ಅವರು ಕೃಷಿಗಾಗಿ ಬ್ಯಾಂಕನಲ್ಲಿ 2 ಲಕ್ಷ ಹಾಗೂ ವೈಯಕ್ತಿಕವಾಗಿ 6 ಲಕ್ಷ ರೂ. ಕೈಸಾಲಮಾಡಿಕೊಂಡಿದ್ದು, ಇದನ್ನು ತೀರಿಸಲಾಗದೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮನೆಯವರು ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ.

By suddi9

Leave a Reply

Your email address will not be published. Required fields are marked *