ಮಂಗಳೂರು: ಯುವ ವಾಹಿನಿ (ರಿ) ಮಂಗಳೂರು ಘಟಕದ ಆಶಯದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಯುವಜನ ಜಾಗೃತಿ – ಪ್ರಗತಿ ಉಪನ್ಯಾಸ – ಸಂವಾದ – ಸಮನ್ವಯ ಕಾರ್ಯಾಗಾರ ಗೋಕರ್ಣನಾಥೇಶ್ವರ ಕಾಲೇಜಿನ ಸಭಾಭವನದಲ್ಲಿ ಡಿ. 22ರಂದು ಹಮ್ಮಿಕೊಳ್ಳಲಾಗಿದೆ. ಕಾರ್ಯಾಗಾರದ ಉದ್ಘಾಟಕರಾಗಿ ಕಾಲೇಜಿನ ಪ್ರಾಂಶುಪಾಲರಾದ ಡಾ. ರೇಣುಕಾ ಕೆ , ಮುಖ್ಯ ಅಥಿತಿಗಳಾಗಿ ದತ್ತೇಶ್ ಪೂಜಾರಿ ಮಾಲಕರು, ಭವಾನಿ ಸ್ಯಾನಿಟರಿ ಮಂಗಳಾದೇವಿ, ದೇವೇಂದ್ರ ಕೋಟ್ಯಾನ್ ಮಾಲಕರು ಪ್ರಿಯಾ ವುಡ್ ವಕ್ರ್ಸ್ ಕೋಡಿಕಲ್, ಯಶವಂತ್ ಪೂಜಾರಿ ಅದ್ಯಕ್ಷರು ಯುವ ವಾಹಿನಿ (ರಿ) ಕೇಂದ್ರ ಸಮಿತಿ, ಸಮಾರಂಭದ ಅದ್ಯಕ್ಷತೆಯನ್ನು ಶ್ರೀ ರವೀಶ್ ಕುಮಾರ್ ವಹಿಸಿಕೊಳ್ಳಲ್ಲಿದ್ದಾರೆ. ಕಾರ್ಯಾಗಾರದಲ್ಲಿ ಆಳ್ವಾಸ್ ಕಾಲೇಜಿನ ಪ್ರಾದ್ಯಾಪಕರು ಡಾ. ಯೋಗಿಶ್ ಕೈರೋಡಿ, ವರ್ತಮಾನದಲ್ಲಿ ನಾರಾಯಣ ಗುರುಗಳ ಸಂದೇಶ ಮತ್ತು ನವನೀತ್ ಡಿ ಹಿಂಗಾಣಿ, ನ್ಯಾಯವಾದಿಗಳು ಬೆಂಗಳೂರು, ಜಾಲತಾಣಗಳು – ಯುವಜನತೆಯ ಮನಸ್ಥಿತಿ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡುವರು. ಸಮನ್ವಯಕಾರರಾಗಿ ಶೇಷಪ್ಪ ಅಮೀನ್ ಸಹಾಯಕ ಪ್ರಾದ್ಯಾಪಕರು ಕಾರ್ಸ್ಟೀಟ್ ಪ್ರಥಮ ದರ್ಜೆ ಕಾಲೇಜು ಹಾಗೂ ರಾಕೇಶ್ ಕುಮಾರ್ ಸಹ ಪ್ರಾದ್ಯಾಪಕರು, ಕಂಪ್ಯೂಟರ್ ಸ್ನಾತಕೋತ್ತರ ವಿಭಾಗ ಅಲೋಶಿಯಸ್ ಕಾಲೇಜುರವರು ಭಾಗವಹಿಸುವರು. ಪಿ.ಯು.ಸಿ, ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿ ಸದುಪಯೋಗ ಪಡೆದುಕೊಳ್ಳಬಹುದು ಎಂದು ಯುವವಾಹಿನಿ (ರಿ) ಮಂಗಳೂರು ಘಟಕದ ಜಗನ್ನಾಥ್ ಶಿರ್ಲಾಲ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
