ಕೈಕಂಬ: ರಾಜ್ಯ ಸರಕಾರ ಎಲ್ಲಾ ಸರಕಾರಿ ಶಾಲಾ-ಕಾಲೇಜುಗಳಲ್ಲಿ ದೇಹದಾರ್ಢ್ಯ ಸ್ಪರ್ಧೆಗೆ ಅನುಕೂಲವಾಗುವಂತೆ ಜಿಮ್ ಸ್ಥಾಪಿಸಲು ಸಿಎಂಗೆ ಮನವಿ ಮಾಡಿದ್ದೇನೆ ಎಂದು ವಿಧಾನ ಸಭಾ ಸದಸ್ಯ ಐವನ್ ಡಿಸೋಜ ತಿಳಿಸಿದ್ದಾರೆ.
ಶನಿವಾರ ವ್ಯಾಪ್ತಿಯಲ್ಲಿ ಮಸಲ್ ಹಂಟ್ ಜಿಮ್ ಕೈಕಂಬ ಸಂಸ್ಥೆಯಿಂದ ಆಯೋಜಿಸಿದ್ದ ಜಿಲ್ಲಾಮಟ್ಟದ ಹವ್ಯಾಸಿ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ಹಿಂದೆ ನಗರದಲ್ಲಿ ಜಿಲ್ಲಾ ಬಾಡಿ ಬಿಲ್ಡಿಂಗ್ ಎಸೋಸಿಯೇಶನ್ ವತಿಯಿಂದ ಆಯೋಜಿಸಿದ್ದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ನಾವೆಲ್ಲರೂ ಇದೇ ರೀತಿ ಭಾಗವಹಿಸಿದ್ದೆವು, ಈ ವೇಳೆ ವಿನಯ್ ರಾಜ್ ಎಂಬ ಯುವ ಸ್ಪರ್ಧಾಳು ಬಾಡಿ ಬಿಲ್ಡಿಂಗ್ ಮಾಡುತ್ತಿದ್ದಂತೆ ಕುಸಿದು ಬಿದ್ದು ಮೃತಪಟ್ಟಿದ್ದ. ಈ ಬಗ್ಗೆ ನಾನು ಮೃತನ ಪತ್ನಿಯಿಂದ ಅರ್ಜಿ ಪಡೆದು ಸಿಎಂಗೆ ನೀಡಿ ನಡೆದ ಘಟನೆ ವಿವರಿಸಿದ್ದೆ ಅದಕ್ಕೆ ಸಿಎಂ, ಕಾನೂನಿನ ಚೌಕಟ್ಟಿನಲ್ಲಿ ಇಂತಹ ಘಟನೆಗಳಿಗೆ ಸರಕಾರ ಪರಿಹಾರ ನೀಡುವ ಕ್ರಮಗಳಿಲ್ಲ ಎಂದು ಮಾನವೀಯತೆ ದೃಷ್ಟಿಯಿಂದ ಮೃತನ ಕುಟುಂಬಕ್ಕೆ 1 ಲಕ್ಷ ರೂ. ಪರಿಹಾರದ ಚೆಕ್ ನೀಡಿದ್ದಾರೆ. ಇದಕ್ಕಾಗಿ ನಾನು ಸಿಎಂ ಸಿದ್ದರಾಮಯ್ಯನವರಿಗೆ ಅಂಭಿನಂದಿಸುತ್ತೇನೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶ್ರೀದೇವಿ ಎಜುಕೇಶನ್ ಟ್ರಸ್ಟ್ ಚೇರ್ ಮ್ಯಾನ್ ಎ.ಸದಾನಂದ ಶೆಟ್ಟಿ, ಗ್ರಾಮೀಣ ಭಾಗದ ಯುವಕರನ್ನು ದೇಹದಾರ್ಢ್ಯ ಸ್ಪರ್ಧೆಯಲ್ಲಿ ಭಾಗವಹಿಸಲು ಪ್ರೋತ್ಸಾಹಿಸಿದ ಜಿಮ್ ನ ಮಾಲಕ ನವೀನ್ ಗ್ರಾಶನ್ ಅವರನ್ನು ಶ್ಲಾಘಿಸಿದರು.
ಕರ್ನಾಟಕ ಶಾಸನ ಸಭೆಯ ಮಾಜಿ ಸದಸ್ಯ ಕೃಷ್ಣ ಪಾಲೇಮಾರ್ ಮಾತನಾಡಿ, ಪ್ರಸ್ತುತ ಗ್ರಾಮೀಣ ಪ್ರದೇಶದಲ್ಲಿ ಯುವಕರನ್ನು ಆಕರ್ಷಿಸಲು ಇಂತಹ ಜಿಮ್ ಸ್ಥಾಪಿಸಿ ಆರೋಗ್ಯ ಸಮಾಜ ನಿರ್ಮಿಸುವ ಅಗತ್ಯವಿದ್ದು, ಇದಕ್ಕೆ ಸರಕಾರದ ಸಹಕಾರ ಬಹಳ ಮುಖ್ಯ ಎಂದು ನುಡಿದರು.
ಜಿಮ್ ಮಾಲಕ ನವೀನ್ ರವರು ಮುಂದಿನಗಳಲ್ಲಿ ಇತರೆ ಭಾಗದಲ್ಲಿ ಜಿಮ್ ನ ಶಾಖೆ ತೆರೆದು ಆ ಮೂಲಕ ಯುವಕರಿಗೆ ಪ್ರೋತ್ಸಾಹಿಸಬೇಕು ಎಂದು ಸಲಹೆ ನೀಡಿದರು.
ಈ ವೇಳೆ ಮೃತ ಬಾಡಿ ಬಿಲ್ಡಿಂಗ್ ಸ್ಪರ್ಧಾಳು ವಿನಯ್ ರಾಜ್ ಕುಟುಂಬಕ್ಕೆ ಸರಕಾರ ವತಿಯಿಂದ 1 ಲಕ್ಷ ರೂ.ಪರಿಹಾರ ಹಣ ನೀಡಲಾಯಿತು. ಹಾಗೂ ಮಸಲ್ ಹಂಟ್ ಜಿಮ್ ನ ಸ್ಮರಣಾ ಸಂಚಿಕೆಯನ್ನು ಬಿಡುಗಡೆ ಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಪೊಂಪೈ ಮಾತಾ ಚರ್ಚ್ ನ ಪ್ರ.ಧರ್ಮಾಧಿಕಾರಿ ಫಾ.ಆ್ಯಂಟನಿ ಲೋಬೊ, ಮಂಗಳೂರು ಮೇಯರ್ ಕವಿತಾ ಸನಿಲ್, ಶಶಿಧರ್ ಹೆಗ್ಡೆ ಮಾತನಾಡಿದರು. ಮಸಲ್ ಹಂಟ್ ಜಿಮ್ ಮಾಲಕ ನವೀನ್ ಗ್ರಾಶನ್, ದ.ಕ. ಜಿ.ಪಂ.ಸದಸ್ಯ ಯು.ಪಿ.ಇಬ್ರಾಹೀಂ, ತಾ.ಪಂ.ಸಚಿನ್ ಅಡಪ, ಸೌತ್ ಕೆನರಾ ಅಮೆಚೂನ್ ಬಾಡಿ ಬಿಲ್ಡಿಂಗ್ ಎಸೋಸಿಯೇಶನ್ ಅಧ್ಯಕ್ಷ ಭಾಸ್ಕರ್ ತೊಕ್ಕೋಟ್, ಕಿರಣ್ ಕುಮಾರ್, ಮಿಸ್ಟರ್ ವಲ್ಡ್ ಖ್ಯಾತಿ ರೈಮಂಡ್ ಡಿಸೋಜ, ಗನ್ ಹೌಸ್ ಪ್ರಮೋಟರ್ ನ ರಾಯಲ್ ಪ್ರಕಾಶ್ ಸಿಂಗ್ ಸಾಂಗ್ ಉಪಸ್ಥಿತಿತರಿದ್ದರು.
ದೇಹದಾರ್ಢ್ಯ ಸ್ಪರ್ಧಾ ವಿಜೇತರು: ಮುಕ್ಕ ಎವಲೇಶನ್ ಜಿಮ್ ನ ಅವಿನಾಶ್ ಸುವರ್ಣ ಅವರಿಗೆ “ಮಸಲ್ ಹಂಟ್ ಕ್ಲಾಸಿಕಲ್-2017” ಹಾಗೂ ಮುಕ್ಕ ಎವಲೇಶನ್ ಜಿಮ್ ನ ರವಿರಾಜ್ ದೇವಾಡಿಗ ಅವರಿಗೆ “ಮೋಸ್ಟ್ ಮಸಲರ್-2017” ಪ್ರಶಸ್ತಿ ಹಾಗೂ ನಗದು ಲಭಿಸಿದೆ.
ಇನ್ನೂ “ಚಾಂಪಿಯನ್ ಆಫ್ ದಿ ಚಾಂಪಿಯನ್-2017” ನಗದು, ಪ್ರಶಸ್ತಿಯನ್ನು ಮುಕ್ಕ ಎವಲೇಶನ್ ಜಿಮ್ ನ ರವಿರಾಜ್ ದೇವಾಡಿಗ ಮತ್ತು ಮಸಲರ್ ಹಂಟ್ ಜಿಮ್ ನ ಗಣೇಶ್ ಕುಲಾಲ್ ಅವರು ತಮ್ಮದಾಗಿಸಿಕೊಂಡಿದ್ದಾರೆ.






