ಧಾರವಾಡ: ಸರ್ಕಾರಿ ಔಷಧ ದಾಸ್ತಾನು ಘಟಕದ ಮಹಿಳಾ ಉದ್ಯೋಗಿಯೋರ್ವರು ರೈಲಿನ ಹಳಿಗೆ ತಲೆ ಇಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿನ ಕ್ಯಾರಕೊಪ್ಪ ಬಳಿಯ ರೈಲ್ವೆ ಹಳಿಯಲ್ಲಿ ಗುರುವಾರ ನಡೆದಿದೆ.
ವನಸಿರಿ ನಗರದ ನಿವಾಸಿ ಸವಿತಾ ಡೊಳ್ಳಿನ (45) ಆತ್ಮಹತ್ಯೆ ಮಾಡಿಕೊಂಡ ಮಹಿಳೆ ಎಮದು ಗುರುತಿಸಲಾಗಿದೆ.
ಸವಿತಾ ಅವರು ಸರ್ಕಾರಿ ಔಷಧ ದಾಸ್ತಾನು ಘಟಕದಲ್ಲಿ ದ್ವಿತೀಯ ದರ್ಜೆ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಇಲ್ಲಿನ ಕ್ಯಾರಕೊಪ್ಪ ಬಳಿ ರೈಲು ಚಲಿಸುತ್ತಿದ್ದ ವೇಳೆ ಹಳಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸವಿತಾ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದರು ಎನ್ನಾಲಾಗುತ್ತಿದ್ದು, ಆತ್ಮಹತ್ಯೆಗೆ ನಿಖರ ಮಾಹಿತಿ ಲಭ್ಯವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

