3636ಕಾರಾವರ: ಇತ್ತೀಚೆಗೆ ನಿಗೂಢವಾಗಿ ಸಾವನ್ನಪ್ಪಿದ ಯುವಕ ಪರೇಶ್ ಮೇಸ್ತಾ ಕುಟುಂಬಕ್ಕೆ ಸಚಿವ ಆರ್. ವಿ. ದೇಶಪಾಂಡೆ 1 ಲಕ್ಷ ರೂ. ನೀಡಿದ ಪರಿಹಾರ ಧನ ನಮಗೆ ಬೇಡ ಬದಲಾಗಿ ನ್ಯಾಯ ಬೇಕೆಂದು ಪರೇಶ್ ಮೇಸ್ತಾ ತಂದೆ ಕಮಲಾಕರ್ ಮೇಸ್ತಾ ಆಗ್ರಹಿಸಿದ್ದಾರೆ.

ಹೊನ್ನಾವರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪರೇಶ್ ಮೇಸ್ತಾನಿಗೆ ಈಜು ಚೆನ್ನಾಗಿ ಬರುತ್ತಿತ್ತು. ಆತ ನೀರಿನಲ್ಲಿ ಮುಳುಗಿರುವುದನ್ನು ಕೇಳಿ ಅಚ್ಚರಿಯಾಗಿದೆ. ನನ್ನ ಮಗನ ಸಹಜ ಸಾವಲ್ಲ. ಅದು ಹತ್ಯೆ, ಆದರೆ ಪೊಲೀಸರು ಅದನ್ನು ಮುಚ್ಚಿಹಾಕಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

ಈ ಪ್ರಕರಣದಲ್ಲಿ ಪೊಲೀಸ್ ಇಲಾಖೆ  ಮೇಲೆ ನಮಗೆ ವಿಶ್ವಾಸವಿಲ್ಲ. ನಮಗೆ ನ್ಯಾಯ ಬೇಕು ಎಂದು ಒತ್ತಾಯಿಸಿದ ಅವರು, ಪರೇಶ್ ಮೆಸ್ತಾ ರಾಜಕೀಯ ಪಕ್ಷದೊಂದಿಗೆ ಗುರುತಿಸಿಕೊಂಡಿಲ್ಲ. ಆತನೊಬ್ಬ ಧೈರ್ಯ ಶಾಲಿ ಯುವಕನಾಗಿದ್ದ ಎಂದರು.

By Suddi9

Leave a Reply

Your email address will not be published. Required fields are marked *