ವಿಟ್ಲ: ಮಂಗಳೂರಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಕರಾಟೆ ಓಪನ್ ಚಾಂಪಿಯನ್ಶಿಪ್ ಸ್ಪರ್ಧೆಯಲ್ಲಿ ವಿಟ್ಲ ಬಸವನಗುಡಿ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯ ಐದನೇ ತರಗತಿ ವಿದ್ಯಾರ್ಥಿ ಶ್ರೀಶಾ ಜಿ ಆರ್ ಟೀಮ್ ಕಟಾ ವಿಭಾಗದಲ್ಲಿ ಮತ್ತು ವೈಯಕ್ತಿಕ ಕುಮಿಟೆ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ. ಇವರು ಶಿಕ್ಷಕ ದಂಪತಿ ಗಡದಕೋಡಿ ರಾಮಣ್ಣ ಗೌಡ ಮತ್ತು ಪ್ರೇಮಲತಾ ಅವರ ಪುತ್ರ. ಕರಾಟೆ ಶಿಕ್ಷಕ ಮಾಧವ ಅಳಿಕೆಯವರ ಶಿಷ್ಯ.
