ವಿಟ್ಲದ.ಕ.ಜಿ.ಪಂ.ಮಾ.ಹಿ.ಪ್ರಾ.ಶಾಲೆ.ವಿಟ್ಲ ಇದರ ವಾರ್ಷಿಕೋತ್ಸವದಲ್ಲಿ ಬಂಟ್ವಾಳ ಕ್ಷೇತ್ರಸಂಪನ್ಮೂಲ ಕೇಂದ್ರದ ಕ್ಷೇತ್ರಸಂಪನ್ಮೂಲ ವ್ಯಕ್ತಿ ಹಾಗೂ ವಿಟ್ಲ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಹಿರಿಯ ವಿದ್ಯಾರ್ಥಿಯಾದ ಶ್ರೀ ನಾರಾಯಣ ಗೌಡ ಇವರಿಗೆ ಗೌರವ ಸಮರ್ಪಣೆ ನಡೆಸಲಾಯಿತು.

schooldayಶ್ರೀ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್ ಮುದ್ದೇನಹಳ್ಳಿ ಇದರ ವತಿಯಿಂದ ಅನುಷ್ಠಾನಗೊಂಡ ಬೆಳಗ್ಗಿನ ಉಪಹಾರ ಯೋಜನೆಯನ್ನು ದಕ್ಷಿಣಕರ್ನಾಟಕದಲ್ಲಿ ವಿಟ್ಲ ಶಾಲೆಯಲ್ಲಿ ಪ್ರಪ್ರಥಮವಾಗಿ ಜಾರಿಗೊಳಿಸುವ ಮೂಲಕ ಬಂಟ್ವಾಳತಾಲೂಕಿನ ಬಹುತೇಕ ಶಾಲೆಗಳಲ್ಲಿ ಇದರ ಸಹಕಾರದೊಂದಿಗೆ ಅನುಷ್ಠಾನಗೊಂಡಿತು. ಅದಲ್ಲದೆ ವಿಟ್ಲ ಶಾಲೆ ಹಾಗೂ ಸುತ್ತಮುತ್ತಲಿರುವ ಶಾಲೆಗಳಲ್ಲಿ ದತ್ತುಸ್ವೀಕಾರದಲ್ಲಿಯೂ ಪ್ರಮುಖ ಪಾತ್ರವಹಿಸಿ, ಶಾಲಾ ಶೈಕ್ಷಣಿಕ ಅಭಿವೃದ್ಧಿಗೆ ಸಹಕರಿಸಿರುತ್ತಾರೆ. ಶ್ರೀ ಅರುಣ್ ವಿಟ್ಲ , ಶ್ರೀ ಡಾ|ಲಕ್ಷ್ಮಿನಾರಾಯಣ, ಶ್ರೀ ಸುಬ್ರಾಯ ಪೈ, ಶ್ರೀ ಎಂ.ಸಂಜೀವ ಪೂಜಾರಿ , ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಶ್ರೀ ಜಗನ್ನಾಥ ಕಾಸರಗೋಡು, ಪ್ರಭಾರ ಮುಖ್ಯಶಿಕ್ಷಕರಾದ ಶ್ರೀ ವಿಶ್ವನಾಥ ಗೌಡ ಕುಳಾಲು, ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀಮತಿ ಸುಜಾತ ರೈ ಕಾರ್ಯಕ್ರಮ ನಿರ್ವಹಿಸಿದರು. ಶ್ರೀಮತಿ ಶ್ರೀಮತಿ ಕೆ ಧನ್ಯವಾದವಿತ್ತರು.

By suddi9

Leave a Reply

Your email address will not be published. Required fields are marked *