ಕೈಕಂಬ: ಮುತ್ತೂರು ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜು “ದಶಮಾನೋತ್ಸವ ಸಂಭ್ರಮಾಚರಣೆ ನೂತನ ತರಗತಿ ಕೊಠಡಿಗಳ ಉದ್ಘಾಟನೆ” ಡಿ. 9ರಂದು ಶನಿವಾರ ಜರುಗಲಿದೆ.
ಕಾರ್ಯಕ್ರಮ ಪೂವಾಹ್ನ 9.00ಕ್ಕೆ ಕಾಲೇಜು ದ್ವಜಾರೋಹಣವನ್ನು ಕಾಲೇಜು ಅಭಿವೃದ್ಧಿ ಸಮಿತಿಯ ಕಾರ್ಯಧ್ಯಕ್ಷ ಹಿರಣ್ಯಾಕ್ಷ ಕೋಟ್ಯಾನ್ ನೆರವೇರಿಸಲಿದ್ದಾರೆ.
ಕೊಳವೂರು ಪಂಚಾಯತ್ ಮಾಜಿ ಛೇರ್ಮೆನ್ ಮುತ್ತೂರು ಗರೋಡಿ ದಿ. ಎಂ. ದೊಡ್ಡಯ್ಯ ಶೆಟ್ಟಿ ಯವರ ಸ್ಮರಣಾರ್ಥವಾಗಿ ಅವರ ಮಕ್ಕಳು ಬಹುಮಾನಗಳನ್ನು ನೀಡಲಿದ್ದಾರೆ.
ನೂತನ ತರಗತಿ ಕೊಠಡಿಗಳ ಉದ್ಘಾಟನೆಯನ್ನು ಸಚಿವ ಬಿ. ರಮಾನಾಥ ರೈ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ಶಾಸಕ ಬಿ.ಎ. ಮೊಹಿಯುದ್ದೀನ್ ಬಾವ ವಹಿಸಲಿದ್ದಾರೆ. ಸ್ಮರಣ ಸಂಚಿಕೆ ಬಿಡುಗಡೆಯನ್ನು ದ.ಕ.ಜಿ.ಪಂ.ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಮಾಡಲಿದ್ದಾರೆ. ಕವನ ಸಂಕಲನ ಬಿಡುಗಡೆಯನ್ನು ಮಾಜಿ ರಾಜ್ಯಸಭಾ ಸದಸ್ಯೆ ಬಿ. ಜಯಶ್ರೀ ಮಾಡಲಿದ್ದಾರೆ.
ಮುಖ್ಯ ಆತಿಥಿಗಳಾಗಿ ಲೋಕಸಭೆ ಸದಸ್ಯ ನಳಿನ್ ಕುಮಾರ್ ಕಟೀಲ್, ತಾಲೂಕು ಪಂಚಾಯತ್ ಅಧ್ಯಕ್ಷ ಮೊಹಮ್ಮದ್ ಮೋನು, ಗ್ರಾಮ ಪಂಚಾಯತ್ ಮುತ್ತೂರು ಅಧ್ಯಕ್ಷ ನಾಗಮ್ಮ, ತಾಲೂಕು ಪಂಚಾಯತ್ ಉಪಧ್ಯಕ್ಷೆ ಪೂರ್ಣಿಮಾ ಗಣೇಶ್ ಪೂಜಾರಿ, ಜಿಲ್ಲಾ ಪಂಚಾಯತ್ ಸದಸ್ಯ ಜನಾರ್ಧನ ಗೌಡ, ಮಾಜಿ ಸಚಿವ ಕೃಷ್ಣ ಜೆ. ಪಾಲೇಮಾರ್, ಪದವಿಪೂರ್ವ ಶಿಕ್ಷಣ ಇಲಾಕೆ ಮಂಗಳೂರು ಉಪನಿರ್ದೇಶಕ ಕೆ.ಆರ್. ತಿಮ್ಮಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ಎಂ.ಪಿ, ಪ್ರಾಂಶುಪಾಲರ ಸಂಘದ ಅಧ್ಯಕ್ಷರು ಎಲ್ವಿರಾ ಫಿಲೋಮಿನ, ಉದ್ಯಮಿ ಒಡ್ಡೂರು ರಾಜೇಶ್ ನಾಯಕ್ ಉಳಿಪಾಡಿಗುತ್ತು, ಕಲಾ ನರ್ದೇಶಕರು ಮುತ್ತೂರು ಬಾಳಿಕೆ ಶಶಿಧರ ಅಡಪ, ಮೆಸ್ಕಾಂ ನಿರ್ದೇಶಕರು ಸುರೇಂದ್ರ ಬಿ. ಕಾಂಬ್ಳಿ, ಎಸ್.ಡಿ.ಎಂ.ಸಿ. ಕಾರ್ಯಾಧ್ಯಕ್ಷ ಚಂದ್ರಹಾಸ ಶೆಟ್ಟಿ, ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಹಿರಣ್ಯಾಕ್ಷ ಕೋಟ್ಯಾನ್, ದಶಮಾನೋತ್ಸವ ಸಮಿತಿ ಕಾರ್ಯಾಧ್ಯಕ್ಷ ತಾ.ಪಂ. ಸದಸ್ಯರು ನಾಗೇಶ್ ಶೆಟ್ಟಿ, ಪ್ರೌಢಶಾಲಾ ವಿಭಾಗ ಮುಖ್ಯ ಶಿಕ್ಷಕರು ಸಿಪ್ರಿಯನ್ ಡಿ ಸೋಜ, ದಶಮಾನೋತ್ಸವ ಸಮಿತಿ ಕೋಶಾಧಿಕಾರಿ ಪ್ರವೀಣ್ ಆಳ್ವ, ದಶಮಾನೋತ್ಸವ ಸಮಿತಿ ಕಾರ್ಯದರ್ಶಿ ಪ್ರಾಂಶುಪಾಲರು ನಿರಂಜನ್ .ಎ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರು ಮೊಹಮ್ಮದ್ ಅನ್ಸಾರ್ ಉಪಸ್ಥಿತರಿದರು.
ಮಧ್ಯಾಹ್ನ 2ರಿಂದ ಸಾಯಾಂಕಾಲ 5 ರವರೆಗೆ ಪ್ರೌಢಶಾಲಾ ವಿದ್ಯಾರ್ಥಿಗಳಿಂದ, ಕಾಲೇಜು ವಿದ್ಯಾರ್ಥಿಗಳಿಂದ ಹಾಗೂ ಹಳೆ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿದೆ .
