ವಿಟ್ಲ: ಅಪೂರ್ವ ಸ್ವಸಹಾಯ ಸಂಘದ ದಶಮಾನೋತ್ಸವ ಕಾರ್ಯಕ್ರಮವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಲಕ್ಷ್ಮಣ ಪೂಜಾರಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ದೇವಸ್ಥಾನದ ಅರ್ಚಕ ಕೃಷ್ಣ ಕೇಕುಣ್ಣಾಯ ಕಾರ್ಯಕ್ರಮ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ವಿಟ್ಲ ವಲಯದ ಅಧ್ಯಕ್ಷ ನರಸಿಂಹ ಬಳ್ಳಾಲ್, ವಿಟ್ಲ ಅರಮನೆಯ ಜಯರಾಮ ಬಳ್ಳಾಲ್, ವಿಟ್ಲ ವಲಯ ಮೇಲ್ವಿಚಾರಕಿ ಪ್ರೇಮ, ವಿಟ್ಲ ಎ ಒಕ್ಕೂಟದ ಸೇವಾ ಪ್ರತಿನಿಧಿ ಕೌಶಿತಾ ಭಾಗವಹಿಸಿದ್ದರು. ಸಂಘದ ಸಂಯೋಜಕ ಚಂದ್ರಶೇಖರ ಸ್ವಾಗತಿಸಿದರು. ಜನಾರ್ಧನ ಪದ್ಮಶಾಲಿ ವರದಿ ವಾಚಿಸಿದರು. ಪ್ರಬಂಧಕ ಕೃಷ್ಣಪ್ಪ ವಂದಿಸಿದರು. ಸಂಘದ ಎಲ್ಲಾ ಸದಸ್ಯರು ಅನಿಸಿಕೆ ವ್ಯಕ್ತ ಪಡಿಸಿದರು. ಒಕ್ಕೆತ್ತೂರು ಒಕ್ಕೂಟದ ಸೇವಾ ಪ್ರತಿನಿಧಿ ಪ್ರಕಾಶ್, ಮಹೇಶ್ವರ ತಂಡದ ಸದಸ್ಯರು ಉಪಸ್ಥಿತರಿದ್ದರು.
