ವಿಟ್ಲ :ಜೆಸಿಐ ಘಟಕದ ವತಿಯಿಂದ ಈಜು ತರಬೇತುದಾರ ನೂಜಿಬೈಲು ಮಂಚಿ ಶಾಲೆಯ ಮುಖ್ಯೋಪಾಧ್ಯಾಯ ಲೋಕನಾಥ ಬೀಡಿನ ಬೈಲು, ವಿಠಲ ಪದವಿ ಪೂರ್ವ ಕಾಲೇಜಿನ ಎನ್ ಎಸ್ ಎಸ್ ಘಟಕವನ್ನು ಹದಿನೈದು ವರ್ಷಗಳಿಂದ ಮುನ್ನಡೆಸುತ್ತಿರುವ ಉಪನ್ಯಾಸಕ ಅಣ್ಣಪ್ಪ ಸಾಸ್ತಾನ ಮತ್ತು ದೈಹಿಕ ಶಿಕ್ಷಣ ನಿರ್ದೇಶಕ ಸುಚೇತನ್ ಜೈನ್ ಇವರನ್ನು ಎನ್ ಎಸ್ ಎಸ್ ಶಿಬಿರದಲ್ಲಿ ಗೌರವಿಸಲಾಯಿತು.
ಈ ಕಾರ್ಯಕ್ರಮದಲ್ಲಿ ವಿಠಲ ವಿದ್ಯಾ ಸಂಘದ ಕೋಶಾಧಿಕಾರಿ ನಿತ್ಯಾನಂದ ನಾಯಕ್, ಪ್ರಾಂಶುಪಾಲ ಆದರ್ಶ ಚೊಕ್ಕಾಡಿ, ಉಪನ್ಯಾಸಕ ಪ್ರಕಾಶ್ ನಾಯಕ್, ಉಪನ್ಯಾಸಕ ಶೋಮಶೇಖರ್, ಜೆಸಿಐ ವಿಟ್ಲ ಘಟಕದ ನಿಕಟ ಪೂರ್ವ ಅಧ್ಯಕ್ಷ ಬಾಬು ಕೊಪ್ಪಳ, ಕಾರ್ಯದರ್ಶಿ ರಾಜಶೇಖರ್, ಪೂರ್ವಾಧ್ಯಕ್ಷರುಗಳಾದ ಭಾಸ್ಕರ ಶೆಟ್ಟಿ ಮತ್ತು ಜೈಕಿಶನ್ ಉಪಸ್ಥಿತರಿದ್ದರು.
