ಬೆಂಗಳೂರು: ಗಣಿ ಉಪಕಾರ್ಯದರ್ಶಿ ಹಾಗೂ ಕೆಎಎಸ್ ಅಧಿಕಾರಿ ಬಸವರಾಜೇಂದ್ರ ಎಂಬವರು ಸಿಡಿಸಿರೋ ಹೊಸ ಬಾಂಬ್‍ನಿಂದ ರಾಜ್ಯದಲ್ಲಿ ದ್ವೇಷ ರಾಜಕಾರಣ ನಡೆಯುತ್ತಿದ್ಯಾ ಎನ್ನುವ ಪ್ರಶ್ನೆಗೆ ಈಗ ಎದ್ದಿದೆ.thdghfh

2010ರಿಂದ 14 ತಿಂಗಳು ಭೂಸ್ವಾಧೀನಾಧಿಕಾರಿಯಾಗಿದ್ದ ಬಸವರಾಜೇಂದ್ರ ಅವರು ಮುಖ್ಯಕಾರ್ಯದರ್ಶಿ ಕುಂಠಿಯ ಅವರಿಗೆ ಪತ್ರ ಬರೆದಿದ್ದಾರೆ. ಬಿಎಸ್ ಯಡಿಯೂರಪ್ಪ ವಿರುದ್ಧ ಸುಳ್ಳು ಹೇಳಿಕೆ ನೀಡುವಂತೆ ಎಸಿಬಿಯ ಇಬ್ಬರು ಅಧಿಕಾರಿಗಳು ನನಗೆ ಬೆದರಿಕೆ ಹಾಕಿದ್ದಾರೆ ಎಂದು ಬಸವರಾಜೇಂದ್ರ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.ಒಂದು ವೇಳೆ, ಬಿಎಸ್‍ವೈ ವಿರುದ್ಧ ಸುಳ್ಳು ಹೇಳದಿದ್ದರೆ ನನ್ನನ್ನು ಆರೋಪಿಯನ್ನಾಗಿ ಮಾಡಿ ಜೈಲಿಗೆ ಹಾಕುತ್ತೇವೆ ಎಂದು ಡಿವೈಎಸ್ಪಿ ಬಾಲರಾಜ್ ಹಾಗೂ ಆಂಥೋಣಿ ಒತ್ತಡ ಹೇರಿದ್ದಾರೆ ಎಂದು ರಾಜ್ಯಪಾಲ ವಾಲಾ ಹಾಗೂ ಮುಖ್ಯ ಕಾರ್ಯದರ್ಶಿ ಕುಂಠಿಯಾ ಬಸವರಾಜೇಂದ್ರ ದೂರು ನೀಡಿದ್ದಾರೆ.ಇಷ್ಟೇ ಅಲ್ಲದೇ ಸುಳ್ಳು ಹೇಳದೇ ಇದ್ದರೆ ಬಡ್ತಿ ನೀಡುವುದಿಲ್ಲ ಎಂದು ಸರ್ಕಾರದಿಂದ ಬ್ಲಾಕ್‍ಮೇಲ್ ಮಾಡಿದ್ದಾರೆ ಎನ್ನುವ ವಿಚಾರವನ್ನು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಬಸವರಾಜೇಂದ್ರ ಅವರು ದೂರು ನೀಡಿದ ಪತ್ರ ಲಭ್ಯವಾಗಿದೆ.

By suddi9

Leave a Reply

Your email address will not be published. Required fields are marked *