ಸಿದ್ಧಕಟ್ಟೆ: ಇತ್ತೀಚಿನ ದಿನಗಳಲ್ಲಿ ದೇವಸ್ಥಾನಗಳು ಪುನರ್ ನಿರ್ಮಾಣಗೊಂಡಿರುವುದು ಜನತೆಯ ಧರ್ಮ,ಭಕ್ತಿ,ನಂಬಿಕೆಗೆ ಸಾಕ್ಷಿಯಾಗಿದೆ.ದೇವರ ಬಗ್ಗೆ ಭಕ್ತಿ ಮತ್ತು ನಂಬಿಕೆ ಇದ್ದಾಗ ಮನಸ್ಸಿನಲ್ಲಿ ಉತ್ತಮ ಚಿಂತನೆ ಬೆಳೆಯುತ್ತದೆ.ಧಾರ್ಮಿಕ ಕ್ಷೇತ್ರಗಳ ಪುನರ್ ನಿರ್ಮಾಣದಂತಹ ಕಾರ್ಯಗಳು ಸಮಾಜವನ್ನು ಒಗ್ಗೂಡಿಸುತ್ತದೆ ಎಂದು ಅಪರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ,ಬ್ಯಾಂಬೂ ಸೊಸೈಟಿ ಆಫ್ ಇಂಡಿಯಾ ಅಧ್ಯಕ್ಷ, ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ಡಾ. ಸುಂದರ ನಾಯ್ಕ ಅಭಿಪ್ರಾಯಪಟ್ಟರು.
ಅವರು ಬಂಟ್ವಾಳ ತಾಲೂಕು ಬುಡೋಳಿ ಗ್ರಾಮ ಮಾಣಿಬೆಟ್ಟು ಶ್ರೀ ದುರ್ಗಾಂಬಿಕಾ ಕ್ಷೇತ್ರದ ಅಷ್ಠಬಂಧ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಶನಿವಾರ ರಾತ್ರಿ ನಡೆದ ಸುಧರ್ಮ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

unnamed

ಮಾಣಿಬೆಟ್ಟು ಶ್ರೀ ಕ್ಷೇತ್ರದ ಧರ್ಮದರ್ಶಿ ಹರೀಶ ನಾಯ್ಕ ಸುಧರ್ಮ ಸಭೆ ಉದ್ಘಾಟಿಸಿದರು. ಪುತ್ತೂರು ವಿಭಾಗದ ಸಬ್‍ಇನ್ಸ್‍ಪೆಕ್ಟರ್ ಆಫ್ ಎಕ್ಸೈಸ್ ಮಹಾಲಿಂಗ ನಾಯ್ಕ,ಬಂಟ್ವಾಳ ತಾಲೂಕು ಮರಾಟಿ ಸಮಾಜ ಸೇವಾ ಸಂಘದ ಸಂಚಾಲಕ ವಿಶ್ವನಾಥ ನಾಯ್ಕ, ಸುಳ್ಯ ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಸೀತಾನಂದ ಬೇರ್ಪಡ್ಕ, ಕೊಂಬೆಟ್ಟು-ಪುತ್ತೂರು ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಕೃಷ್ಣ ನಾಯ್ಕ, ಉದ್ಯಮಿ ಉಮೇಶ್ ಶೆಟ್ಟಿ,ಮಾಜಿ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಂದರ ನಾಯ್ಕ ಕೆ., ಶ್ರೀ ಕ್ಷೇತ್ರದ ಸೇವಾ ಸಮಿತಿಯ ಅಧ್ಯಕ್ಷ ಬಿ.ಮಂಜಪ್ಪ ನಾಯ್ಕ ಮಾಣಿಬೆಟ್ಟು,ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಎಂ.ತುಂಗಪ್ಪ ಬಂಗೇರ, ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ರಾಮಚಂದ್ರ ಶೆಟ್ಟಿ ದಂಡೆ, ದೈವಜ್ಞ ಜ್ಯೋತಿಷ್ಯ ತಿಲಕಂ ಶ್ರೀ ಶಶಿಧರನ್ ಮಾಂಗಾಡ್, ದೈವಜ್ಞ ರಾಜೇಶ್ ಇರಿಯ, ಬದಿಯಡ್ಕ ಮಂತ್ರಮೂರ್ತಿ ಗುಳಿಗ ಸನ್ನಿಧಿಯ ಪ್ರಧಾನ ಕರ್ಮಿ ಗೋಪಾಲಕೃಷ್ಣ ಕುಲಾಲ್ ಓಂತಿಜಾಲು ಉಪಸ್ಥಿತರಿದ್ದರು.
ಸೇವಾ ಸಮಿತಿ ಗೌರವಾಧ್ಯಕ್ಷ ಎ.ಸೋಮಪ್ಪ ನಾಯ್ಕ ಮಂಗಳೂರು, ಕೋಶಾಧಿಕಾರಿ ವಾಮನ ನಾಯ್ಕ ಮಾಣಿಬೆಟ್ಟು, ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಧ್ಯಕ್ಷ ಸಂಜೀವ ಪೂಜಾರಿ ಪಿಲಿಂಗಾಲು, ಪ್ರಧಾನ ಕಾರ್ಯದರ್ಶಿ ಜಯರಾಮ ನಾಯ್ಕ ನಿನ್ಯಾರು,ಕೋಶಾಧಿಕಾರಿ ಶಶಿಧರ ನಾಯ್ಕ ಮಾಣಿಬೆಟ್ಟು, ಜೀರ್ಣೋದ್ಧಾರ ಸಮಿತಿಯ ಕೋಶಾಧಿಕಾರಿ ರಾಮಕೃಷ್ಣ ದೇವಾಡಿಗ ಮತ್ತಿತರರು ಇದ್ದರು.
ಶ್ರೀ ಕ್ಷೇತ್ರದ ಸೇವಾ ಸಮಿತಿಯ ಕಾರ್ಯಾಧ್ಯಕ್ಷ ಕೆ. ಬಾಲಕೃಷ್ಣ ನಾಯ್ಕ ಬೆಳ್ಳಾರೆ ಸ್ವಾಗತಿಸಿದರು.ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಕೆಂಬಾರೆ ವಂದಿಸಿದರು. ಜೀರ್ಣೋದ್ಧಾರ ಸಮಿತಿಯ ಸಲಹೆಗಾರ ಎ. ಗೋಪಾಲ ಅಂಚನ್ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *