ಮಂಗಳೂರು:26 ವರ್ಷಗಳಿಂದ ಮುಂಬಯಿ, ಬೆಂಗಳೂರು, ಮಂಗಳೂರು, ಉಡುಪಿ, ಕಾರ್ಕಳ ವಿವಿಡೆಡೆ ಪತ್ರಕರ್ತರಾಗಿ, ಪತ್ರಿಕಾ ಸಂಘಟನೆಯ ಸಂಘಟಕರಾಗಿ, ಮಾಧ್ಯಮ ತರಬೇತಿ ನಿರ್ದೇಶಕರಾಗಿ, ಛಾಯಾಗ್ರಾಹಕರಾಗಿ ಸೇವೆ ಸಲ್ಲಿಸಿರುವ ಶೇಖರ ಅಜೆಕಾರು ಅವರ ಪತ್ರಿಕೋದ್ಯಮ ಕ್ಷೇತ್ರದ ಸಾಧನೆಗಾಗಿ ಗೋವಾದಲ್ಲಿ ಭಾನುವಾರ ನಡೆದ 9 ನೇ ಕನ್ನಡಿಗರ ಸಮಾವೇಶದಲ್ಲಿ ಕರುನಾಡ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪತ್ರಕರ್ತರ ವೇದಿಕೆ ಬೆಂಗಳೂರು ಇದರ ಉಡುಪಿ ಜಲ್ಲಾ ಘಟಕದ ಅಧ್ಯಕ್ಷರಾಗಿ ವರ್ಷವೂ ಪತ್ರಿಕೋದ್ಯಮ ದಿನಾಚರಣೆಯನ್ನು ಹಿರಿಯರೆಡೆಗೆ ನಮ್ಮ ನಡಿಗೆ ಕಾರ್ಯಕ್ರಮ, ಮಾಧ್ಯಮ ಅಕಾಡೆಮಿ ಪ್ರಶಸ್ತಿ ವಿಜೇತ ದಿ. ರಾಜೇಶ ಶಿಬಾಜೆ ಪ್ರಶಸ್ತಿ ಪ್ರದಾನ ಮತ್ತು ಶಾಲೆಗಳಲ್ಲಿ ಮಾಧ್ಯಮ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದ್ದು ಕರ್ನಾಟಕ ಮಲ್ಲ ಮುಂಬಯಿ ದೈನಿಕ, ಜನವಾಹಿನಿ, ಕುಂದಪ್ರಭಗಳಲ್ಲಿ ಪುರ್ಣಕಾಲಿಕ ಪತ್ರಕರ್ತರಾಗಿ ಮತ್ತು ಕನ್ನಡಪ್ರಭ, ಉಷಾಕಿರಣ, ದೈಜಿವರ್ಲ್ದ್ ಮಾಧ್ಯಮ ಸಮೂಹಗಳಲ್ಲಿ ಪತ್ರಕರ್ತರಾಗಿ ಕಾರ್ಯನಿರ್ವಹಿಸಿದ್ದು ಅಂತರ್‍ಜಾಲ ಪತ್ರಿಕೋದ್ಯಮದಲ್ಲಿ ವಿಶೇಷ ಪರಿಣತಿ ಪಡೆದಿದ್ದಾರೆ. 8 ಬೆಳದಿಂಗಳ ಸಾಹಿತ್ಯ ಸಮ್ಮೇಳನಗಳ ರೂವಾರಿ, ಆದಿಗ್ರಾಮೋತ್ಸವ, ಚಲನ ಚಿತ್ರೋತ್ಸವಗಳ ಸ್ಥಾಪಕ ಮತ್ತು ಸಂಘಟಕ, ಮುಂಬಯಿಯ ಕನ್ನಡ ಸೇವಾ ಪೆÇವಾಯಿ ಸಂಘದ ಸ್ಥಾಪಕಾಧ್ಯಕ್ಷ, ಪಾಸ್‍ಪೆÇೀಲಿ ಕನ್ನಡ ಮಾಧ್ಯಮ ಶಾಲೆಯ ಸ್ಥಾಪನೆಯ ಕಾರಣಪುರುಷರಾಗಿದ್ದು ಮಾಧ್ಯಮದ ಅವರ ಪ್ರಾಮಾಣಿಕ ಸೇವೆಗಾಗಿ ಕರುನಾಡ ಪದ್ಮಶ್ರೀ ಗೌರವ ನೀಡಲಾಗುತ್ತಿದೆ.
ಕರ್ಮಭೂಮಿ ಕನ್ನಡ ಸಂಘ ಗೋವಾ ಮತ್ತು ಕರ್ನಾಟಕ ಜಾಗೃತಿ ವೇದಿಕೆ ಬೆಂಗಳೂರು ಸಂಯುಕ್ತವಾಗಿ ಆಯೋಜಿಸಿದ್ದ ಕನ್ನಡಿಗರ9 ನೇ ಸಾಂಸ್ಕೃತಿಕ ಸಮಾವೇಶವು ಅಥಣಿಯ ಹಿರಿಯ ರಂಗಕರ್ಮಿ ಕೆ. ಎಲ್. ಕುಂದರಗಿ ಅಧ್ಯಕ್ಷತೆಯಲ್ಲಿ ಗೋವಾ ಸರ್ಕಾರವಿಧಾನಸಭಾ ಅಧ್ಯಕ್ಷ ಪ್ರಮೋದ್ ಸಾವಂತ್ ಉದ್ಘಾಟಿಸಿದರು.ಕೆ. ಎಲ್. ಕುಂದರಗಿ ಮಾತನಾಡಿ, ನಿರಂತರ ಭಾಷಣಗಳ ಬದಲು ಮಕ್ಕಳ, ಹಿರಿಯರ ಪ್ರತಿಭಾ ಪ್ರದರ್ಶನ ಮತ್ತು ಸಾಧಕರ ಗೌರವ ವಿಶೇಷ. 201 ಕುಂಭಮೇಳದ ಮಹಿಳೆಯರು ನಗರದುದ್ದಕ್ಕೂ ಮೆರವಣಿಗೆಯಲ್ಲಿ ಕರೆತಂದ ಪರಿ ಗೋವಾದ ಕನ್ನಡಿಗರಲ್ಲಿನ ಕನ್ನಡಾಭಿಮಾನದ ಧ್ಯೋತಕ ಎಂದರು.ಕರ್ನಾಟಕ ಜಾಗೃತಿ ವೇದಿಕೆಯ ಅಧ್ಯಕ್ಷ ಮಹೇಶಬಾಬು, ಕರ್ಮಭೂಮಿ ಕನ್ನಡ ಸಂಘದ ಅಧ್ಯಕ್ಷ ಹನುಮಂತ ರೆಡ್ಡಿ ಶಿರೂರು, ಖಜಾಂಚಿ ಜಯರಾಮ ಆಳ್ವ ಇದ್ದರು.
