ವಿಟ್ಲ : : “ಪ್ರತಿ ಮಗುವನ್ನು ಸಂಪನ್ಮೂಲದ ಕೊಡುಗೆಯಾಗಿ ಸಮಾಜಕ್ಕೆ ಕೊಡುವ ಜವಬ್ದಾರಿ ಬೇಸಿಗೆ ಶಿಬಿರಗಳ ಮೂಲಕ ನಡೆಯುತ್ತದೆ” ಎಂದು ಸಂಪನ್ಮೂಲ ವ್ಯಕ್ತಿಯಾದ ಕಸ್ತೂರಿ ಬೊಳುವಾರು ಅವರು ಹೇಳಿದರು. ಅವರು ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ “ಕಲಾ ಸಂಗಮ” ಬೇಸಿಗೆ ಶಿಬಿರ ಉದ್ಘಾಟಸಿ ಮಾತನಾಡಿದರು.
ಸಂಚಾಲಕರಾದ ಪ್ರಹ್ಲಾದ್ ಜೆ ಶೆಟ್ಟಿಯವರು ಅಧ್ಯಕ್ಷತೆ ವಹಿಸಿ “ಯಾರೂ ಹುಟ್ಟುವಾಗಲೇ ಸರ್ವಜ್ಞರಾಗಿರುವುದಿಲ್ಲ ಆದರೆ ಪ್ರತಿಭೆ ಹೊರಪಡಿಸಲು ಸಿಕ್ಕಿದ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು” ಎಂದರು. ಶಾಲಾ ಆಡಳಿತಾಧಿಕಾರಿಯವರಾದ ಸಿ.ಶ್ರೀಧರ್‍ರವರು ಪ್ರಸ್ತಾವಿಕವಾಗಿ ಮಾತನಾಡುತ್ತಾ “ ಸಂಸ್ಕøತಿ ಬೆಳೆಸಲು ಬೇಕಾದ ಸಂಪನ್ಮೂಲಗಳನ್ನು ಬೇಸಗೆ ಶಿಬಿರದ ಮೂಲಕ ನೀಡುತ್ತಿದ್ದೇವೆ ಅದನ್ನು ಸದುಪಯೋಗಪಡಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

???????????????????????????????

???????????????????????????????

???????????????????????????????

???????????????????????????????

??????????????????????????????? ???????????????????????????????

ಇತರ ಸಂಪನ್ಮೂಲ ವ್ಯಕ್ತಿ ಹಾಗೂ ತರಬೇತುದಾರರಾಗಿ ಗೋಪಾಲ ಕೃಷ್ಣ ಕಳೆಂಜ ಮತ್ತು ಸತೀಶ್ ಆಚಾರ್ಯ ಮಾಣಿ (ಯಕ್ಷಗಾನ), ಮೌನೇಶ್ ವಿಶ್ವಕರ್ಮ ಮತ್ತು ಪ್ರಶಾಂತ್ ಬೆಳ್ತಂಗಡಿ (ರಂಗಭೂಮಿ) , ಪ್ರಮೀಳ (ನೃತ್ಯ) , ಸಂಧ್ಯಾ(ಸಂಗೀತ) , ಧನಂಜಯ ಮರ್ಕಂಜೆ ಮತ್ತು ಮುಳೀಧರ (ಚಿತ್ರಕಲೆ) , ರಾಮಚಂದ್ರ (ಪ್ರಾಣಾಯಾಮ), ಪಾರ್ಥ ವಾರಾಣಾಸಿ (ಈಜು) , ಪ್ರವೀಣ್ ಕಾಮತ್ (ಚದುರಂಗ) ಆಗಮಿಸಿದ್ದರು. ಉಭಯ ವಿಭಾಗದ ಮುಖ್ಯೋಪಾಧ್ಯಾಯಿನಿರಾದ ವಿಜಯಲಕ್ಷ್ಮೀ ವಿ ಶೆಟ್ಟಿ ಹಾಗೂ ಗ್ರೇಸ್ ಪಿ. ಸಲ್ದಾನ ಉಪಸ್ಥಿತರಿದ್ದರು.
ದೈಹಿಕ ಶಿಕ್ಷಣ ಶಿಕ್ಷಕ ದಿನಕರ್ ಪೂಜಾರಿ ಸ್ವಾಗತಿಸಿ , ಕಲಾಶಿಕ್ಷಕ ರಾಮಚಂದ್ರ ಅಜಿರ ವಂದಿಸಿದರು, ಶಿಕ್ಷಕಿ ಸುಧಾ ಎನ್ ರಾವ್ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *