ಮಂಗಳೂರು: `ರಾಘವೇಂದ್ರ ಸ್ವಾಮಿಗಳು ದೇವರಲ್ಲ, ಅವರನ್ನು ಭಕ್ತರು ಪೂಜಿಸಿದರೂ ಅವರು ದೇವರಾಗುವುದಿಲ್ಲ. ದೇವರೆಂದು ಪೂಜಿಸಲು ದೇವರ ಸ್ಥಾನಮಾನ ನೀಡುವುದು ಸರಿಯಲ್ಲ’ ಎಂದು ಪೇಜಾವರ ವಿಶ್ವೇಶತೀರ್ಥ ಶ್ರೀಪಾದರು ಹೇಳಿದ್ದಾರೆ.
ನಗರದಲ್ಲಿ ಮಾತಾಡಿದ ಪೇಜಾವರ ಶ್ರೀಗಳು `ರಾಘವೇಂದ್ರ ಸ್ವಾಮಿಗಳು ದೇವರಲ್ಲ. ಅವರು ಒಬ್ಬ ಗುರು ಮಾತ್ರ ಆಗಿದ್ದಾರೆ. ಅವರಿಗೆ ದೇವರ ಸ್ಥಾನ ಕೊಟ್ಟು ಪೂಜಿಸುವುದು ಸರಿಯಲ್ಲ. ದೇವರ ಸ್ಥಾನ ಪಡೆಯಲು ನಿರ್ದಿಷ್ಟ ಅರ್ಹತೆಗಳು ಬೇಕು. ಭಕ್ತವರ್ಗ ಪೂಜಿಸಿದ ತಕ್ಷಣ ಯಾರೂ ದೇವರೆಂದು ಕರೆಸಿಕೊಳ್ಳುವುದಿಲ್ಲ’ ಎಂದಿದ್ದಾರೆ.
ಪೇಜಾವರ ಶ್ರೀಗಳ ತುಲಭಾರ ಸೇವೆ:
ಕಲ್ಕೂರ ಪ್ರತಿಷ್ಠಾನ(ರಿ.) ಹಾಗೂ ಕನ್ನಡ ಸಾಹಿತ್ಯ ಪರಿಷತ್ ಇದರ ಜಿಲ್ಲಾಧ್ಯಕ್ಷ ಪ್ರದೀಪ್‍ಕುಮಾರ್ ಕಲ್ಕೂರ ಅವರ ಮನೆಯಲ್ಲಿ ಮಂಗಳವಾರ ಸಂಜೆ ಪೇಜಾವರ ಶ್ರೀಗಳ ವಾರ್ಷಿಕ ತುಲಾಭಾರ ಸೇವೆ ನೆರವೇರಿತು. ಶ್ರೀಗಳನ್ನು ನಾಣ್ಯದಲ್ಲಿ ತುಲಭಾರ ಮಾಡಲಾಯಿತು. ಈ ಸಂದರ್ಭ ವಿಶ್ವ ಹಿಂದೂ ಪರಿಷತ್ ನಾಯಕ ಎಂ.ಬಿ.ಪುರಾಣಿಕ್, ಕ.ಸಾ.ಪ. ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಪ್ರದೀಪ್‍ಕುಮಾರ್ ಕಲ್ಕೂರ ಮತ್ತಿತರ ಗಣ್ಯರು ಹಾಜರಿದ್ದರು.


