4ದ

3್

2ದ

1ದ
ಮಂಗಳೂರು: ಅಕ್ರಮ ಗೋ ಸಾಗಾಟದ ಟೆಂಪೆÇ ರಿಕ್ಷಾ ಹಾಗೂ ಕಾರ್‍ಗೆ ಡಿಕ್ಕಿಯಾದ ಘಟನೆ ಇಂದು ಮುಂಜಾನೆ ಬಿಜೈಯಲ್ಲಿ ಸಂಭವಿಸಿದೆ. ಟೆಂಪೋದಲ್ಲಿನ 30 ಜಾನುವಾರುಗಳ ಪೈಕಿ 15ಕ್ಕೂ ಹೆಚ್ಚು ಮೃತಪಟ್ಟಿದೆ. ಲಾಲ್‍ಬಾಗ್‍ನಲ್ಲಿ ಪೆÇಲೀಸರು ಗಸ್ತಿನಲ್ಲಿರುವುದನ್ನು ಗಮನಿಸಿದ ಅಕ್ರಮ ಜಾನುವಾರು ಸಾಗಾಟಗಾರರು ಟೆಂಪೆÇ ತಿರುಗಿಸಿ ಬಿಜೈ ಕೆಎಸ್‍ಆರ್‍ಟಿಸಿಯತ್ತ ಸಾಗಿದ್ದರು. ಕೆಎಸ್ಸಾರ್ಟಿಸಿ ಬಳಿ ಪಾರ್ಕ್ ಮಾಡಿದ್ದ ರಿಕ್ಷಾಕ್ಕೆ ಡಿಕ್ಕಿಯಾದ ಟೆಂಪೂ ಅಲ್ಲಿಂದ ಮುಂದೆ ಸಾಗಿ ಬಿಜೈ ಚರ್ಚ್ ಮಾರ್ಗದಲ್ಲಿ ಬಂದಿದ್ದು, ಚರ್ಚ್ ಬಳಿಯ ಅಪಾರ್ಟ್‍ಮೆಂಟ್ ಒಂದರ ಎದುರು ನಿಲ್ಲಿಸಿದ್ದ ಕಾರ್‍ಗೆ ಡಿಕ್ಕಿ ಹೊಡೆದಿತ್ತು. ಕಾರ್ ಟ್ರಾನ್ಸ್‍ಫರ್ ಮರ್‍ಗೆ ಡಿಕ್ಕಿಯಾಗಿತ್ತು. ಟ್ರಾನ್ಸ್‍ಫಮರ್ ಕಂಬಕ್ಕೆ ಹಾನಿಯಾಗಿದೆ. ಬಳಿಕ ಮುಂದೆ ಸಾಗಲು ಅವಕಾಶವೇ ಇಲ್ಲದಂದಾಗಿದ್ದರಿಂದ ಆರೋಪಿಗಳು ಟೆಂಪೂ ಬಿಟ್ಟು ಪರಾರಿಯಾಗಿದ್ದರು.
ಟೆಂಪೆÇದಲ್ಲಿ ಜಾನುವಾರು ಇರುವುದನ್ನು ಕಂಡ ಸಾರ್ವಜನಿಕರು ಪೆÇಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಬರ್ಕೆ ಪೆÇಲೀಸರು ಜಾನುವಾರು ಸಹಿತ ಟೆಂಪೆÇವನ್ನು ಪೆÇಲೀಸ್ ಠಾಣೆಗೆ ಸಾಗಿಸಿದ್ದರು. ಟೆಂಪೆÇ ಪೆÇಲೀಸ್ ಠಾಣೆಯ ಆವರಣದಲ್ಲಿ ಪರಿಶೀಲಿಸಿದಾಗ ಅದರಲ್ಲಿ ಇದ್ದ 30ಕ್ಕೂ ಹೆಚ್ಚು ಜಾನುವಾರುಗಳಲ್ಲಿ ಅರ್ಧಕ್ಕಿಂತ ಹೆಚ್ಚು ಜಾನುವಾರುಗಳು ಮೃತಪಟ್ಟಿದ್ದವು

By suddi9

Leave a Reply

Your email address will not be published. Required fields are marked *