ಸುದ್ದಿ9ಸಿದ್ದಕಟ್ಟೆ ರೋಟರಿ ಸಮುದಾಯದಳ ಸಿದ್ದಕಟ್ಟೆ ಇದರ 2014-15ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ದಿನಾಂಕ : 06-07-2014ನೇ ಅದಿತ್ಯವಾರ ಸಿದ್ದಕಟ್ಟೆ ಚಚರ್್ ಸಭಾಂಗಣದಲ್ಲಿ ನಡೆಯಿತು. ಪದಗ್ರಹಣ ಅಧಿಕಾರಿಯಾಗಿ ಆಗಮಿಸಿದ ಮೂಡಬಿದ್ರೆ ರೋಟರಿ ಕ್ಲಬ್ನ ಅಧ್ಯಕ್ಷರಾದ ರೊ|ಡಾ| ಮುರಳಿ ಕೃಷ್ಣರವರು ನೂತನ ಅಧ್ಯಕ್ಷರಾದ ಮೈಕಲ್ ಡಿ`ಕೋಸ್ತ ಮತ್ತು ಅವರ ಪದಾಧಿಕಾರಿಗಳ ತಂಡಕ್ಕೆ ಪ್ರತಿಜ್ಷಾ ವಿಧಿ ಭೋಧಿಸಿದರು. ಮುಖ್ಯ ಅತಿಥಿಗಳಾಗಿ ತಾಲೂಕು ಪಂಚಾಯತ್ ಕಾರ್ಯನಿವರ್ಾಹಣಾಧಿಕಾರಿಯಾದ ಶ್ರೀ.ವಿಶ್ವನಾಥ ಪೂಜಾರಿಯವರು ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಸ್ಥಳೀಯ ಪ್ರಥಮ ದಜರ್ೆ, ಪದವಿ ಪೂರ್ವ ಮತ್ತು ಎಸ್.ಎಸ್.ಎಲ್.ಸಿ. ಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾಥರ್ಿಗಳಿಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು. ಈ ವರ್ಷ ರೋಟರಿ ಸಮುದಾಯ ದಳಕ್ಕೆ ಹೊಸದಾಗಿ ಸೇರಿದ 8 ಸದಸ್ಯರಿಗೆ ಪ್ರಮಾಣ ವಚನ ನೀಡಿ ಅಭಿನಂದಿಸಲಾಯಿತು. ಕಾರ್ಯಕ್ರಮದ ಕೊನೆಗೆ ಕು| ನಿಹಾರಿಕಾ ಇವರಿಂದ ನೃತ್ಯ ಪ್ರದರ್ಶನ ಏರ್ಪಡಿಸಲಾಯಿತು. ವೇದಿಕೆಯಲ್ಲಿ 2013-14ನೇ ಸಾಲಿನ ಆರ್.ಸಿ.ಸಿ ಸಭಾಪತಿ ರೊ|ಡಾ| ಸುದೀಪ್ ಕುಮಾರ್, ನೂತನ ಸಭಾಪತಿ ಜೆರಾಲ್ಡ್ ಡಿ`ಕೋಸ್ತ, ನೂತನ ಅಧ್ಯಕ್ಷ ಶ್ರೀ.ಮೈಕಲ್ ಡಿ`ಕೋಸ್ತ ನಿಕಟ ಪೂರ್ವ ಅಧ್ಯಕ್ಷ ಶ್ರೀ.ವಿನಯ ಚಂದ್ರ ಕಾರ್ಯದಶರ್ಿ ಹೆಚ್.ಎ.ರೆಹಮಾನ್ ಉಪಸ್ಥಿತರಿದ್ದರು. ಶ್ರೀ ಬಸಯ್ಯ ಅಲಿಮಟ್ಟಿ ನಿರೂಪಿಸಿದ ಕಾರ್ಯಕ್ರಮದಲ್ಲಿ ಶ್ರೀ ವಾಸುದೇವ ಆಚಾರ್ ಸ್ವಾಗತಿಸಿದರು ಮತ್ತು ಶ್ರೀ ರೆಹಮಾನ್ ಹೆಚ್.ಎ ವಂದಿಸಿದರು.

