ಮಂಗಳೂರು: ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ, ಕೃಷಿ, ಕೈಗಾರಿಕೆ, ಕ್ರೀಡೆ, ಟೆಕ್ಸ್ಟೈಲ್ಸ್, ಉದ್ಯೋಗ, ರಸ್ತೆ, ವಸತಿ ಸಣ್ಣ – ಮಧ್ಯಮ ಕೈಗಾರಿಕೆ ಸೇರಿದಂತೆ ನಗರ ಪ್ರದೇಶಗಳನ್ನು ಗಮನದಲ್ಲಿರಿಸಿಕೊಂಡು, ದೇಶದ ಎಲ್ಲಾ ಭಾಗ, ಎಲ್ಲಾ ವರ್ಗ, ಎಲ್ಲಾ ಕ್ಷೇತ್ರಗಳಲ್ಲಿ ಅಭಿವೃದ್ಧಿಯನ್ನು ಕಣ್ಣಮುಂದಿರಿಸಿ ವಸ್ತುನಿಷ್ಠ ಬಜೆಟ್ನ್ನು ಕೇಂದ್ರ ಸರಕಾರ ಮಂಡಿಸಿದ್ದು, ದ.ಕ ಜಿಲ್ಲಾ ಬಿಜೆಪಿ ಸ್ವಾಗತಿಸಿದೆ.

ಕೃಷಿಗೆ ಪ್ರಾಮುಖ್ಯತೆ: ಕೃಷಿಗೆ ವಿಶೇಷ ಗಮನಹರಿಸಿದ್ದು 1000 ಕೋಟಿ ವೆಚ್ಚದ ನೀರಾವರಿ ಯೋಜನೆಗಳನ್ನು ಪ್ರಕಟಿಸಿದೆ. ಕುಡಿಯುವ ನೀರು ಮತ್ತು ನದಿ ಜಲ ಶುದ್ಧೀಕರಣ ನದಿ ಜೋಡಣೆ ಬಗ್ಗೆಯೂ ಆದ್ಯತೆ ನೀಡಲಾಗಿದೆ. ಭೂರಹಿತ ರೈತರಿಗೆ ನಬಾಡರ್್ ಮೂಲಕ ಸೌಲಭ್ಯಗಳು, ಕೃಷಿಕ್ಷೇತ್ರದ ಮೂಲಸೌಕರ್ಯದ ಅಭಿವೃದ್ಧಿಗೆ 100 ಕೋಟಿ ಮೀಸಲು, ದೀಘರ್ಾವಧಿ ಮತ್ತು ಅಲ್ಪಾವಧಿ ಕೃಷಿಸಾಲ, ರೈತರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ, ಜಾನುವಾರು ತಳಿ ಅಭಿವೃದ್ಧಿ, ಕೃಷಿ ಉತ್ಪನ್ನ ಸಂಗ್ರಹಣೆ, ಬೃಹತ್ ಗೋದಾಮುಗಳು, ರೈತರಿಗೆ ಪ್ರತ್ಯೇಕ ದೂರದರ್ಶನ, ಆಕಾಶವಾಣಿ ಕೇಂದ್ರ, ಪ್ರತಿರಾಜ್ಯದಲ್ಲೂ ಕೃಷಿ ಉತ್ಪನ್ನ ಮಾರುಕಟ್ಟೆಗೆ ಉತ್ತೇಜನ, ಗ್ರಾಮೀಣ ಭಾಗದಲ್ಲಿ ವಿವಿಧ ಮೂಲಗಳಿಂದ ವಿದ್ಯುತ್ ಉತ್ಪಾದನೆಗೆ ಆದ್ಯತೆ, ಮಣ್ಣು ಪರೀಕ್ಷಾ ಕೇಂದ್ರ ಮತ್ತು ಹವಾಮಾನ ಅಧ್ಯಯನ ಮತ್ತು ಪರಿವರ್ತನಾ ಸಾಧ್ಯತಾ ಅಧ್ಯಯನ ಕೇಂದ್ರ, ಗ್ರಾಮೀಣ ಭಾಗದಲ್ಲಿ ‘ಇ’ ಕ್ರಾಂತಿ, ಹೈನುಗಾರಿಕೆ ಮತ್ತು ಮೀನುಗಾರಿಕಾ ಅಭಿವೃದ್ಧಿಗೆ ಒತ್ತು, ಅಸ್ಸಾಂನಲ್ಲಿ ಕೃಷಿ ತಂತ್ರಜ್ಞಾನ ಕೇಂದ್ರ, ಗ್ರಾಮ ಜ್ಯೋತಿ ಯೋಜನೆಗಳ ಮೂಲಕ ಗ್ರಾಮೀಣಾಭಿವೃದ್ಧಿ ಮತ್ತು ಕೃಷಿಗೆ ಉತ್ತಮ ಅವಕಾಶ ನೀಡಲಾಗಿದೆ ಎಂದು ಜಿಲ್ಲಾ ಬಿಜೆಪಿ ವಕ್ತಾರ ಸತೀಶ್ ಪ್ರಭು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೈಗಾರಿಕೆಗೆ ಉತ್ತೇಜನ:- ರಾಷ್ಟ್ರೀಯ ಕೈಗಾರಿಕಾ ವಲಯ ಸ್ಥಾಪನೆಗೆ ನಿಧರ್ಾರ ಮತ್ತು ತುಮಕೂರು ಸೇರಿದಂತೆ 7 ಕೇಂದ್ರಗಳಲ್ಲಿ ಕೈಗಾರಿಕಾ – ಸ್ಮಾಟರ್್ ಸಿಟಿ ಯೋಜನೆ, 100 ಜಿಲ್ಲೆಗಳಲ್ಲಿ ಮಹಿಳೆಯರಿಗಾಗಿ ವಿಶೇಷ ವಿತ್ತ ವಲಯ, ಸಣ್ಣ – ಮಧ್ಯಮ ಕೈಗಾರಿಕೆಗಳಿಗೆ ಉತ್ತೇಜನ. ರಫ್ತು ಉತ್ತೇಜನಕ್ಕೆ ಪ್ರತ್ಯೇಕ ರಫ್ತು ಆಯೋಗ, ಕೈಗಾರಿಕಾ ಅಭಿವೃದ್ಧಿಯಲ್ಲಿ ಪೂರಕವಾಗಲಿದೆ. ಟೆಕ್ಸ್ಟೈಲ್ ಉದ್ಯಮ ಅಭಿವೃದ್ಧಿಗೆ ‘ಟೆಕ್ಸ್ಟೈಲ್ ಕ್ಲಸ್ಟರ್’ ಒಂದು ಕ್ರಾಂತಿಕಾರಕ ಯೋಜನೆಯಾಗಿದೆ.
ಆರೋಗ್ಯ, ಕ್ರೀಡೆ, ಶಿಕ್ಷಣ:- ದೇಶದಲ್ಲಿ 4 ಏಮ್ಸ್ ಆಸ್ಪತ್ರೆಗಳು, 12 ಹೊಸ ಮೆಡಿಕಲ್ ಕಾಲೇಜುಗಳ ಸ್ಥಾಪನೆ, 5 ಐಐಟಿ ಮತ್ತು ಐಐಎಂ ಕಾಲೇಜುಗಳು, ಪ್ರಾಥಮಿಕ ಮತ್ತು ಉನ್ನತ ಶಿಕ್ಷಣಗಳಿಗೆ ಪ್ರೋತ್ಸಾಹ, ಕ್ರೀಡಾಳುಗಳಿಗೆ ಪ್ರೋತ್ಸಾಹ, ಪಾರಂಪರಿಕ ಕ್ರೀಡೆಗೆ ಉತ್ತೇಜನ, ಮಣಿಪುರದಲ್ಲಿ ಪ್ರತ್ಯೇಕ ಕ್ರೀಡಾ ವಿಶ್ವವಿದ್ಯಾಲಯ ಮುಂತಾದವು ಜನತೆಯಲ್ಲಿ ಸಂತೋಷವನ್ನುಂಟು ಮಾಡಿದೆ.
ಹೊಸ ಸಾಫ್ಟ್ವೇರ್ ಉದ್ಯಮಕ್ಕೆ ಉತ್ತೇಜನ, ಕಡಿಮೆದರದ ಗೃಹ ನಿಮರ್ಾಣಕ್ಕೆ ಯೋಜನೆ, ಮೆಟ್ರೋ ನಿಮರ್ಾಣ, ರಾಷ್ಟ್ರೀಯ ಕೌಸಲ್ಯಾಭಿವೃದ್ಧಿ ನಿಗಮ, ಪ್ರತಿ ಮನೆಗೂ ಶೌಚಾಲಯ ನಿಮರ್ಾಣ, ಎಲ್ಲಾ ರಾಜ್ಯಗಳಲ್ಲಿ ಪೊಲೀಸ್ ವ್ಯವಸ್ಥೆ ಆಧುನೀಕರಣಕ್ಕೆ ಯೋಜನೆ, ಗ್ರಾಮೀಣ ರಸ್ತೆಗಳಿಗೆ ಹೊಸ ಕಾಯಕಲ್ಪ, ವಿಕಲಚೇತನರಿಗೆ, ಹಿರಿಯ ನಾಗರಿಕರಿಗೆ, ಯುವಕರಿಗೆ, ಮಹಿಳೆಯರಿಗೆ ವಿವಿಧ ಯೋಜನೆಗಳು, ಮಹಿಳಾ ಸಬಲೀಕರಣಕ್ಕಾಗಿ ಮಹಿಳಾ ವಿಶೇಷ ವಿತ್ತ ವಲಯ, ಮಹಿಳಾ ಸಂರಕ್ಷಣೆಗೆ ಆದ್ಯತೆ, ಪ್ರವಾಸೋದ್ಯಮ ಉತ್ತೇಜನಕ್ಕಾಗಿ ದೇಶದ 9 ವಿಮಾನ ನಿಲ್ದಾಣಗಳಲ್ಲಿ ‘ಇ’ ವೀಸಾ ವ್ಯವಸ್ಥೆ, ದೇಶದಲ್ಲಿ ದಿನದ 24 ಗಂಟೆ ವಿದ್ಯುತ್ ಸರಬರಾಜು ಉದ್ದೇಶದ ಗುರಿ, ವಿತ್ತೀಯ ಕಾರಿಡಾರ್, ದೇಶದ ಬಂದರುಗಳ ಅಭಿವೃದ್ಧಿ, ಒಳನಾಡು ಸಾರಿಗೆಗೆ ಉತ್ತೇಜನ, ರೂ. 37000 ಕೋಟಿ ವೆಚ್ಚದಲ್ಲಿ 8500 ಕಿ.ಮೀ. ಉದ್ದದ ರಾಷ್ಟ್ರೀಯ ಹೆದ್ದಾರಿ ನಿಮರ್ಾಣ, ಬೆಲೆ ನಿಯಂತ್ರಣಕ್ಕೆ ಪ್ರತ್ಯೇಕ ನಿಧಿ ಜೋಡಣೆ, ಸೌರಶಕ್ತಿ ವ್ಯವಸ್ಥಿತ ಬಳಕೆಗೆ ಯೋಜನೆಗಳು, 1,600 ಕಿ.ಮೀ. ಉದ್ದದ ಜಲಮಾರ್ಗ ಯೋಜನೆ ಜನತೆಯಲ್ಲಿ ಮೋದಿ ಸರಕಾರದ ಕಾರ್ಯನಿರ್ವಹಣೆ ಬಗ್ಗೆ ಭರವಸೆ ಮೂಡಿಸಿದೆ. ಖಾಸಗಿ ಸಹಭಾಗಿತ್ವದೊಂದಿಗೆ ನಗರದಲ್ಲಿ ಮೂಲಸೌಕರ್ಯ ಅಭಿವೃದ್ಧಿ ಯೋಜನೆ, ಕೆವೈಸಿ ಬಗ್ಗೆ ಸ್ಪಷ್ಟ ನಿದರ್ೆಶನ, ಆದಾಯ ಕರ ಮಿತಿಯನ್ನು 2 ಲಕ್ಷದಿಂದ 2.5 ಲಕ್ಷ ರೂ.ಗಳಿಗೆ ಏರಿಸಿರುವುದು, ಹಿರಿಯ ನಾಗರಿಕರಿಗೆ ರೂ. 3 ಲಕ್ಷದ ವರೆಗೆ ಆದಾಯ ತೆರಿಗೆ ಮಿತಿಯನ್ನು ಏರಿಸಿರುವುದು ಸ್ವಾಗತಾರ್ಹ ನಿಧರ್ಾರ.
ದೇಶದ ಎಲ್ಲಾ ವರ್ಗಗಳ, ಎಲ್ಲಾ ಪ್ರದೇಶಗಳ, ಎಲ್ಲಾ ಕ್ಷೇತ್ರಗಳ ಸರ್ವತೋಮುಖ ಅಭಿವೃದ್ಧಿಯನ್ನು ಗಮನದಲ್ಲಿರಿಸಿಕೊಂಡು, ವಿಶೇಷ ಅಧ್ಯಯನದೊಂದಿಗೆ, ನಿರೀಕ್ಷೆಯೊಂದಿಗೆ ಮಂಡಿಸಿರುವ ಕೇಂದ್ರ ಸರಕಾರದ ಬಜೆಟ್ನ್ನು ದೂರಗಾಮಿ ಚಿಂತನೆಯ, ಅಭಿವೃದ್ಧಿಪರ ಬಜೆಟ್ ಎಂದು ಬಿಜೆಪಿ ಜಿಲ್ಲಾ ವಕ್ತಾರ ಸತೀಶ್ ಪ್ರಭು ಪ್ರಶಂಸಿದ್ದಾರೆ.
