ವಿಟ್ಲ: ಇತ್ತೀಚೆಗೆ ನಿಧನರಾದ ಬಾಲಗೋಕುಲದ ಮಾಜಿ ಉಪಾಧ್ಯಕ್ಷ ಕಡಂಬು ರಾಮಚಂದ್ರ ಬನ್ನಿಂತಾಯರ ಆತ್ಮಕ್ಕೆ ಚಿರ ಶಾಂತಿಯನ್ನು ಕೋರಿ ವಿಟ್ಲ ಕ್ಷೇತ್ರ ಬಾಲಗೋಕುಲ ವತಿಯಿಂದ ಶ್ರದ್ಧಾಂಜಲಿ ಸಭೆಯನ್ನು ವಿಶ್ವ ಹಿಂದೂ ಪರಿಷತ್ ವಿಟ್ಲ ಕಚೇರಿಯಲ್ಲಿ ಸಲ್ಲಿಸಲಾಯಿತು. ಈ ಕಾರ್ಯಕ್ರಮದಲ್ಲಿ ಬಾಲಗೋಕುಲದ ಅಧ್ಯಕ್ಷ ಜಗದೀಶ ಪಾನೆಮಜಲು, ಕಾರ್ಯದರ್ಶಿ ಪದ್ಮನಾಭ ಕಟ್ಟೆ, ಕೋಶಾಧಿಕಾರಿ ರಾಜೇಶ್ ಆರ್ ಕೆ ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು.

