ವಿಟ್ಲ: ಪಡ್ನೂರು ಗ್ರಾಮದ ಎರ್ಮೆನಿಲೆ ಪರವ ಕುಟುಂಸ್ತರ ಆರಾಧ್ಯ ದೈವ ಶ್ರೀ ಉಳ್ಳಾಲ್ತಿ ಅಮ್ಮನವರ ಚಂದನದ ಮೊಗ ಪುನರ್ ನಿರ್ಮಾಣಗೊಳ್ಳುತ್ತಿದ್ದು ಇದಕ್ಕೆ ಕೆಲಿಂಜ ಹಿಂದೂ ಧಾರ್ಮಿಕ ಸಮಿತಿಯಿಂದ ಸೇವಾ ರೂಪವಾಗಿ ರೂಪಾಯಿ 15 (ಹದಿನೈದು) ಸಾವಿರ ದೇಣಿಗೆ ನೀಡಲಾಯಿತು.
ಈ ಸಂದರ್ಭದಲ್ಲಿ ಪರವ ಕುಟುಂಬದ ಪ್ರಮುಖ ಶೆಖರ ಪರವ ಹಾಗೂ ಸಮಿತಿಯ ಅಧ್ಯಕ್ಷ ವಿಷ್ಣು ಭಟ್ ಅಡ್ಯೇಯಿ ಹಾಗೂ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು
