ವಿಟ್ಲ: ವಿಟ್ಲದ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯ 7 ನೇ ತರಗತಿ ವಿದ್ಯಾರ್ಥಿ ನಿಶಿತ್ ಭಟ್, ಮಂಗಳೂರು ಹಂಪನಕಟ್ಟೆ ಕರ್ನಾಟಕ ಸ್ಟೇಟ್ ಗವರ್ನ್‍ಮೆಂಟ್ ಎಂಪ್ಲೋಯೀಸ್ ಅಸೋಸಿಯೇಶನ್ ಭವನದಲ್ಲಿ ನಡೆದ 9ನೇ ವೆಸ್ಟರ್ನ್ ನ್ಯಾಷನಲ್ ಲೆವೆಲ್ ಓಪನ್ ಕರಾಟೆ ಸ್ಪರ್ಧೆ 2016 ಇದರಲ್ಲಿ ಇಂಡಿವಿಜುವಲ್ ಕಟ್ಟಾ, ಗ್ರೂಪ್ ಕಟ್ಟಾ ಹಾಗೂ ಇಂಡಿವಿಜುವಲ್ ಕುಮಿಟೆ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾನೆ. ಈತ ಕರಾಟೆ ಶಿಕ್ಷಕ ಮಾಧವ ಅಳಿಕೆಯವರಿಂದ ತರಬೇತಿ ಪಡೆಯುತ್ತಿದ್ದು ನೆತ್ರೆಕೆರೆ ಅನಿತಾ ಮತ್ತು ಗಣೇಶ್ ಭಟ್ ದಂಪತಿಯ ಪುತ್ರ.

