ಬೆಳಗಾವಿ: ಐಟಿ ದಾಳಿ ವೇಳೆ ಕಂತೆ ಕಂತೆ 2000 ರೂಪಾಯಿ ನೋಟುಗಳು ಮತ್ತು ಕೆಜಿಗಟ್ಟಲೆ ಬಂಗಾರ ಪತ್ತೆಯಾದ ಹಿನ್ನೆಲೆಯಲ್ಲಿ ಸಿಎಂ ಆಪ್ತ ಅಧಿಕಾರಿಗಳಾದ ಕಾವೇರಿ ನೀರಾವರಿ ನಿಗಮದ ಎಂಡಿ ಚಿಕ್ಕರಾಯಪ್ಪ ಮತ್ತು ರಾಜ್ಯ ಹೆದ್ದಾರಿ ಪ್ರಾಧಿಕಾರದ ಅಧ್ಯಕ್ಷ ಜಯಚಂದ್ರ ಅವರನ್ನ ಅಮಾನತು ಮಾಡಲಾಗಿದೆ. ವಿಧಾನಪರಿಷತ್`ನಲ್ಲಿ ಗೃಹ ಸಚಿವ ಜಿ. ಪರಮೇಶ್ವರ್ ಈ ಆದೇಶ ಮಾಡಿರುವ ಬಗ್ಗೆ ಪ್ರಕಟಿಸಿದ್ದಾರೆ.

