ಮೂಡುಬಿದಿರೆ: ಪರಿಸರದಲ್ಲಿ ಶಾಲಾ ವಿದ್ಯಾರ್ಥಿನಿಯರ ಅಪಹರಣ ಯತ್ನ ಪ್ರಕರಣವು ಬುಧವಾರ ಬೆಳಗಿಗೆ ಬಂದಿದ್ದು, ಪೋಷಕರು, ಪೊಲೀಸರು ಹಾಗೂ ಶಾಲೆಯವರು ಎಚ್ಚೆತ್ತುಕೊಳ್ಳುವ ಅನಿವಾರ್ಯತೆಯಿದೆ.

abduction

ಮೂಡುಬಿದಿರೆ ಪೇಟೆಯಲ್ಲಿ ಬುಧವಾರ ಸ್ಥಳೀಯ ಶಾಲೆಯ ವಿದ್ಯಾರ್ಥಿಯೊಬ್ಬಳನ್ನು ಅಪಹರಣಕ್ಕೆ ಯತ್ನಿಸಿದ್ದು, ಈ ವೇಳೆ ವಿದ್ಯಾರ್ಥಿಯು ಕೂಗಿಕೊಂಡಾಗ ತಂಡ ಪರಾರಿಯಾಗಿದೆ. ತಂಡದಲ್ಲಿ ಪೊಲೀಸ್ ವೇಷಧಾರಿಯೊಬ್ಬ ಇರುವುದರ ಕುರಿತು ವಿದ್ಯಾರ್ಥಿನಿ ಮಾಹಿತಿ ನೀಡಿದ್ದಾಳೆ. ನ.26ರಂದು ಅದೇ ಶಾಲೆಯ ಇನ್ನೊಬ್ಬಳು ವಿದ್ಯಾರ್ಥಿಗೆ ತೋಡಾರಿನಲ್ಲಿ ಇದೇ ರೀತಿಯ ಅನುಭವವಾಗಿದೆ. ಅಲ್ಲದೇ 10 ದಿನಗಳ ಹಿಂದೆ ಕೊಡಂಗಲ್ಲು ಮದರಸದ ವಿದ್ಯಾರ್ಥಿನಿಯೊಬ್ಬಳನ್ನು ಕೂಡ ಓಮ್ನಿಯಲ್ಲಿ ಬಂದ ತಂಡ ಅಪಹರಣಕ್ಕೆ ಯತ್ನಿಸಿದ್ದು ಸ್ಥಳೀಯರಿಂದ ತಿಳಿದುಬಂದಿದೆ.  ಪೊಲೀಸರು ವಿದ್ಯಾರ್ಥಿನಿಯರ ದಾಖಲಿಸಿಕೊಂಡಿದ್ದು ತನಿಖೆ ಆರಂಭಿಸಿದ್ದಾರೆ.

By Suddi9

Leave a Reply

Your email address will not be published. Required fields are marked *